ಮದುವೆಗೆ ಒಪ್ಪದ ಯುವತಿ – ಪುರೋಹಿತ Suicide.

ಕಾರವಾರ ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ಯುವತಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ರಫೀಕ್ ಪ್ರಕರಣ ಮಾಸುವ ಮುನ್ನವೇ, ಅಂಕೋಲಾ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.
ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ
ಅಂಕೋಲದಲ್ಲಿ ಪ್ರೀತಿಸಿದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ Suicide ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಈ ಘಡನೆ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡವನು ಪವನ್ ಭಟ್ (24) ಎಂಬ ಯುವಕನಾಗಿದ್ದಾನೆ.

ಇದನ್ನು ನೋಡಿ : ಕೈದಿ ಭೇಟಿಯಾಗಲು ಗಾಂಜಾ ತಂದಿದ್ದ ಇಬ್ಬರು ಜೈಲಿನಲ್ಲೇ ಲಾಕ್!
ನೇಣು ಬಿಗಿದುಕೊಂಡು ಆತ್ಮಹತ್ಯೆ
ಪವನ್ ಭಟ್ ವೃತ್ತಿಯಿಂದ ಪುರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇನ್ನು ಅದೇ ಗ್ರಾಮದ ಯುವತಿಯೊಂದಿಗಿನ ಪ್ರೀತಿಯ ಸಂಬಂಧವನ್ನು ವಿವಾಹದ ಮೂಲಕ ಮುಂದುವರಿಸಲು ಆಕೆಯ ಮೇಲೆ ಒತ್ತಾಯ ಹಾಕಿದ್ದನು ಎನ್ನಲಾಗಿದೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪವನ್ ಮಾನಸಿಕವಾಗಿ ನೊಂದಿದ್ದು, ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : Dina Bhavishya|ದಿನ ಭವಿಷ್ಯ 7 ಜನವರಿ 2026




