Weather Report : ರಾಜ್ಯದಲ್ಲಿ ಚಳಿ ಹೆಚ್ಚಾದ ಹಿನ್ನಲೆ ಹವಾಮಾನ ಇಲಾಖೆ ಎಚ್ಚರಿಕೆ.!

Weather Report : ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಕುಸಿತವಾಗಿದ್ದು, ಚಳಿಯ ಪ್ರಮಾಣ ಹೆಚ್ಚಾಗಿದೆ. ತುಮಕೂರು, ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಟ್ಟ ಮಂಜಿನ ಜೊತೆ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಚಳಿಯ ಪ್ರಮಾಣ ಹೆಚ್ಚಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೋಡ ಕವಿದ ವಾತಾವರಣದ ಜೊತೆ ಚಳಿ
ಇನ್ನು ರಾಜ್ಯದ ಕೆಲ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಂಗಾಳಕೊಲ್ಲಿಯಿಂದ ಬೀಸುವ ಪೂರ್ವ ಮಾರುತಗಳು ತಾತ್ಕಾಲಿಕ ತಾಪಮಾನ ಏರಿಕೆಗೆ ಕಾರಣವೆಂದು ಹೇಳಲಾಗ್ತಿದ್ದು, ಇದ್ರಿಂದ ಮೋಡ ಕವಿದ ವಾತಾವರಣದ ಜೊತೆ ಚಳಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯದ ಬಗ್ಗೆ ಜಾಗ್ರತೆ
ಅಲ್ಲದೇ ಈಗಾಗಲೇ ರಾಜ್ಯದಲ್ಲಿ ತಾಪಮಾನ ಕುಸಿತದಿಂದ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಚಳಿ ಹೆಚ್ಚಾಗಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ದರು ಹೆಚ್ಚಿನ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನು ಓದಿ : ಯುವಕನಿಂದ ಕಿರಿಕ್ ಆರೋಪ – ಬಾಲಕಿ Suicide
ಸಡನ್ ವೆದರ್ ಚೇಂಜ್
ಇನ್ನು ಈಗಾಗಲೇ ರಾಜ್ಯದ ಜನರು ಭಾರೀ ಚಳಿಯಿಂದ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇತ್ತ ತುಮಕೂರಿನಲ್ಲೂ ಸಹ ಈ ಬಾರಿ ಚಳಿಯ ಪ್ರಮಾಣ ಹೆಚ್ಚಿದ್ದು, ಬೆಳಿಗ್ಗೆ 9 ಗಂಟೆಯಾದ್ರೂ ಸೂರ್ಯನ ದರ್ಶನವೇ ಕಾಣದಂತಾಗಿದೆ.
ಇನ್ನು ಕೆಲವೊಮ್ಮೆ ಸಡನ್ ಆಗಿ ವೆದರ್ ಚೇಂಜ್ ಆಗ್ತಾ ಇದ್ದು, ಜನರು ಹೇಗಪ್ಪಾ ಕೆಲಸ ಕಾರ್ಯಕ್ಕೆ ಹೋಗೋದು ಅಂತಾ ಚಿಂತಾಗೀಡಾಗಿದ್ದಾರೆ. ಒಟ್ನಲ್ಲಿ ಇನ್ನು ಈ ತಿಂಗಳು ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ನೋಡಿ : ʻದಳಪತಿʼ ವಿಜಯ್ ಕೊನೆಯ ಸಿನಿಮಾಗೆ ಸಂಕಷ್ಟ; ʻಜನ ನಾಯಗನ್’ ರಿಲೀಸ್ ಆಗತ್ತಾ?




