Toxic ಸಿನಿಮಾದಲ್ಲಿ ನಟಿಸಿರುವ ನಟಿಯರ ಪೋಸ್ಟರ್ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಇನ್ನು ಈ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಇದರ ಪ್ರಚಾರಗಳು ನಡೆಯುತ್ತಿವೆ.
ಕ್ಯಾರೆಕ್ಟರ್ ಪೋಸ್ಟರ್
ಪ್ರಚಾರದ ಭಾಗವಾಗಿ ಸಿನಿಮಾದಲ್ಲಿ ನಟಿಸಿರುವ ನಟಿಯರ ಕ್ಯಾರೆಕ್ಟರ್ ಪೋಸ್ಟರ್ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಪೋಸ್ಟರ್ಗಳು ಬಿಡುಗಡೆಯಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಇದನ್ನು ಓದಿ : Bengaluru|ಮೆಜೆಸ್ಟಿಕ್-ಮಲ್ಲೇಶ್ವರ ರಸ್ತೆ 3 ತಿಂಗಳು ಬಂದ್ – ಯಾಕೆ?

Toxic ನಲ್ಲಿ ನೆಗೆಟಿವ್ ಶೇಡ್
ಇಂದು ನಟ ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ರುಕ್ಮಿಣಿ ಅದ್ಭುತವಾಗಿ ಕಾಣಿಸಿಕೊಂಡಿದ್ದು, ತುಸು ಗ್ಲಾಮರಸ್ ಮತ್ತು ಗಂಭೀರ ಲುಕ್ನಲ್ಲಿ ಕಾಣಿಸುತ್ತಿದ್ದಾರೆ. ಪೋಸ್ಟರ್ನ್ನು ನೋಡಿದ ಅಭಿಮಾನಿಗಳಲ್ಲಿ, ರುಕ್ಮಿಣಿ ಅವರ ಪಾತ್ರ ನೆಗೆಟಿವ್ ಶೇಡ್ ಹೊಂದಿರಬಹುದೇ? ಎಂಬ ಕುತೂಹಲ ಮೂಡಿದೆ.
ರುಕ್ಮಿಣಿ ವಸಂತ್ ಪಾತ್ರದ ಹೆಸರೇನು?
Toxic ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲಿಸಾ. ಯಾವುದೋ ಪಾರ್ಟಿಯ ಮಧ್ಯೆ ಗಂಭೀರವಾಗಿ ನಡೆದು ಬರುತ್ತಿರುವ ದೃಶ್ಯ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದೆ. ತಾರಾ ಸುತಾರಿಯಾ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿರುವುದು ಗಮನ ಸೆಳೆದರೆ, ರುಕ್ಮಿಣಿ ಪಾತ್ರ ಕೈಯಲ್ಲಿ ಪರ್ಸ್ ಹಿಡಿದಿರುವುದು ಅವರ ಪಾತ್ರ ರಫ್ ಆಂಡ್ ಟಫ್ ಅಲ್ಲದಿದ್ದರೂ ಗಂಭೀರ ಮತ್ತು ಪ್ರಭಾವಶಾಲಿ ಪಾತ್ರ ಎಂಬ ಸೂಚನೆಯನ್ನು ನೀಡುತ್ತದೆ.
ಇದನ್ನು ನೋಡಿ : ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದೇಗೆ?




