ಮೆಜೆಸ್ಟಿಕ್ನಿಂದ ಮಲ್ಲೇಶ್ವರದ ಮಂತ್ರಿಮಾಲ್ವರೆಗಿನ Road Bandh ಆಗಲಿದೆ.

Bengaluru ನಗರದ ಪ್ರಮುಖ ಮಾರ್ಗವಾಗಿರುವ ಮೆಜೆಸ್ಟಿಕ್ನಿಂದ ಮಲ್ಲೇಶ್ವರಂ ಮಂತ್ರಿ ಮಾಲ್ವರೆಗೆ ಸಾಗುವ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಸಂಪೂರ್ಣವಾಗಿ ಬಂದ್ ಆಗಲಿದೆ. ಈ ಕಾಮಗಾರಿಯನ್ನು B Smile ಕಂಪನಿ ಕೈಗೊಂಡಿದೆ.
ಇದನ್ನು ಓದಿ : ಹಿರಿಯ ಕಾಂಗ್ರೆಸ್ ನಾಯಕ Suresh Kalmadi ನಿಧನ
ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
Road Bandh ಆಗಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮೆಜೆಸ್ಟಿಕ್ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ಪಾಸ್ ಮೂಲಕ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶಿಸಬೇಕು ಎಂದು ಸೂಚಿಸಲಾಗಿದೆ.
ಹೆಚ್ಚು ವಾಹನ ದಟ್ಟಣೆ
ಈ ಬದಲಾವಣೆಯ ಪರಿಣಾಮವಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಮೆಜೆಸ್ಟಿಕ್ನಿಂದ ಮಂತ್ರಿ ಮಾಲ್ ಮಾರ್ಗವಾಗಿ ಕೇವಲ 10 ನಿಮಿಷಗಳಲ್ಲಿ ಮಲ್ಲೇಶ್ವರಂ ತಲುಪಲು ಸಾಧ್ಯವಾಗುತ್ತಿತ್ತು. ಆದರೆ ಈಗ ರಸ್ತೆ ಬಂದ್ ಆಗಿರುವುದರಿಂದ, ವಿಶೇಷವಾಗಿ ಪೀಕ್ ಅವಧಿಯಲ್ಲಿ 30 ನಿಮಿಷದಿಂದ ಒಂದು ಗಂಟೆವರೆಗೆ ಸಮಯ ತೆಗೆದುಕೊಳ್ಳುತ್ತಿದೆ.
ಇದನ್ನು ನೋಡಿ : ಆ ನಟನಿಂದ ನನ್ನ ಮದುವೆ ನಿಂತಿತು, ಜೀವನ ಹಾಳಾಯ್ತು: ನಟಿ ಪೂನಂ ಕೌರ್




