
Chikkanayakanahalli-
ನೆನ್ನೆ ಸಂಜೆ ಸುಮಾರು 6.30ರ ಹೊತ್ತಿಗೆ ಹುಳಿಯಾರು ಸಮೀಪ ಬಳ್ಳೆಕಟ್ಟೆ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಂದಿಕೆರೆ ಮಠದ ಮಹೇಶ್ ಗೌಡರ ಪುತ್ರ ಹಾಗೂ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಹರ್ಷ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಈ ದಾರುಣ ಘಟನೆಯ ಬಳಿಕ ಸ್ಥಳೀಯರು ಕೋಪಗೊಂಡು ರಸ್ತೆಯ ಮೇಲೆ ಭಾರಿ ಪ್ರತಿಭಟನೆ ನಡೆಸಿದರು. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ರಸ್ತೆ ಹಂಪ್ ಹಾಗೂ ಸೂಚನಾ ಫಲಕಗಳ ಕೊರತೆಯಿಂದ ನಿರಂತರ ಅಪಘಾತಗಳು ನಡೆಯುತ್ತಿವೆ. ಹಂಪ್ಸ್ ಹಾಗೂ ಸೂಚನ ಫಲಕ ಹಾಕಿ ಎಂದು ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಮರಣಾನಂತರ ಕ್ರಮವಲ್ಲ, ಮುಂಚಿತ ಸುರಕ್ಷತೆ ಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ರು. ಅಪಘಾತ ತಡೆಗಟ್ಟಲು ತಕ್ಷಣವೇ ರಸ್ತೆ ಹಂಪ್ ನಿರ್ಮಿಸಿ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಕ್ರಮ ಕೈಗೊಂಡರೆ ಮಾತ್ರ ಮುಂಬರುವ ದುರಂತಗಳು ತಪ್ಪಿಸಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ರು.
ಈ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿದ್ರು. ನಂತರ ಅಪಘಾತ ಪ್ರಕರಣವನ್ನು ದಾಖಲಿಸಿಕೊಂಡರು.




