
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸೀಸನ್ 4ರಿಂದ ಮನೆಮಾತಾದ ಚಂದುಳ್ಳಿ ಚಲುವೆ ಆಸಿಯಾ ಬೇಗಮ್, ಮತ್ತೆ ಟ್ರೆಂಡ್ನಲ್ಲಿದ್ಧಾರೆ. ಕಿರುತೆರೆಗೆ ರಿಯಾಲಿಟಿ ಶೋ ಮೂಲಕ ಕಾಲಿಟ್ಟ ಆಸಿಯಾ, ನಂತರ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಹಳ್ಳಿ ಹೈದ ಹನುಮಂತನ ಮೆಂಟರ್ ಆಗಿ ಮಿಂಚಿದರು. ಈ ಜೋಡಿ ಸೀಸನ್ ಒಂದರಲ್ಲಿ ರನ್ನರ್ ಅಪ್ ಆಗಿದ್ದು, ಇವತ್ತಿಗೂ ‘ಹನುಮ-ಆಸಿಯಾ’ ಜೋಡಿ ಸ್ಮಿತಿಕೆಯಾಗಿಯೇ ಉಳಿದಿದೆ.
ಇತ್ತೀಚೆಗಷ್ಟೇ ಸೀರೆ ತೊಟ್ಟು, ಕೈಯಲ್ಲಿ ತಾವರೆ ಹಿಡಿದು ನದಿ ದಡದಲ್ಲಿ ನಲಿದಾಡುವ ಹೊಸ ಫೋಟೋ ಶೂಟ್ ಮಾಡಿರುವ ಆಸಿಯಾ, ತಮ್ವ ನ್ಯೂ ಲುಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಮನಸೂರೆಗೊಳ್ಳುತ್ತಿದ್ದಾರೆ. ನ್ಯಾಚುರಲ್ ಲುಕ್ನಲ್ಲಿ ಪ್ರಕೃತಿಯ ನಡುವೆ ಮಿಂಚಿದ ನಟಿಯ ಫೋಟೋಗೆ “ಚಂದಕ್ಕಿಂತ ಚಂದ ಚಂದುಳ್ಳಿ ಚಲುವೆ” ಎಂಬ ಕಮೆಂಟ್ಗಳ ಸುರಿಮಳೆಯೇ ಹರಿದಿದೆ.




