Vijayalakshmi ಬ್ಯಾಡ್ ಕಮೆಂಟ್ – ಮತ್ತೆ ಇಬ್ಬರ ಬಂಧನ.

ನಟ ದರ್ಶನ್ ಪತ್ನಿ Vijayalakshmi ತಮ್ಮ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಹಾಕುವವರ ವಿರುದ್ದ ಕಂಪ್ಲೇಂಟ್ ನೀಡಿದ್ರು. ಅದರ ಬೆನ್ನಲ್ಲೇ ಕೆಟ್ಟದಾಗಿ ಕಮೆಂಟ್ ಮಾಡಿದ್ದವ್ರಿಗೆ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿ ಇಬ್ಬರನ್ನ Arrest ಮಾಡಿದ್ದರು.

ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಇದೀಗ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್ಸ್ ಹಾಕಿದ್ದ ಕೇಸ್ನಲ್ಲಿ ಮತ್ತೆ ಇಬ್ಬರನ್ನ ಅರೆಸ್ಟ್ ಮಾಡಲಾಗಿದ್ದು, ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿರುವ ನಾಗರಾಜ್ ಹಾಗೂ ಧಾರವಾಡದಲ್ಲಿ ಆಡಿಟರ್ ಆಗಿ ಕೆಲಸ ಮಾಡ್ತಿದ್ದ ಪ್ರಶಾಂತ್ ತಳವಾರ್ ಅರೆಸ್ಟ್ ಆಗಿದ್ದಾರೆ.
ಇದನ್ನು ಓದಿ : ಮಗುವಿಗೆ ವಿಷವುಣಿಸಿದ ಪಾಪಿ ತಂದೆ!

ಆರೋಪಿಗಳನ್ನು ವಶಕ್ಕೆ
ಈ ಹಿಂದೆ ಬೆಂಗಳೂರಿನ ಆಟೋ ಡ್ರೈವರ್ ಚಂದ್ರು ಹಾಗೂ ದಾವಣಗೆರೆಯ ಸಾಫ್ಟ್ ವೇರ್ ಇಂಜಿನಿಯರ್ ನಿತಿನ್ ಬಂಧನ ವಾಗಿತ್ತು. ಇದೀಗ ಮತ್ತೆ ಇಬ್ಬರ ಬಂಧನವಾಗಿದ್ದು, ಆರೋಪಿಗಳನ್ನ CCB ಸೈಬರ್ ಕ್ರೈಮ್ ಪೊಲೀಶರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ನನಗೆ Z ಶ್ರೇಣಿ ಭದ್ರತೆ ಕಲ್ಪಿಸಿ; ಸಿಎಂಗೆ ಜನಾರ್ದನ ರೆಡ್ಡಿ ಪತ್ರ




