Bengaluru : ಮಗುವಿಗೆ ಜನ್ಮ ಸಂಬಂಧಿ ಕಾಯಿಲೆ ಅಂತ ವಿಷವುಣಿಸಿದ ತಂದೆ.

ಮಗುವಿಗೆ ಜನ್ಮ ಸಂಬಂಧಿ ಕಾಯಿಲೆಯಿದೆ ಎಂದು ಜನ್ಮ ಕೊಟ್ಟ ತಂದೆಯೇ ವಿಷವುಣಿಸಿರುವ ಘಟನೆ Bengaluru ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
2 ವರ್ಷದ ಮಗುವನ್ನು ಕೊಲ್ಲಲು ಪ್ರಯತ್ನ
ಕೋಲಾರ (Kolar) ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ ಎಂಬಾತ 2 ವರ್ಷದ ಮಗುವನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಈ ಘಟನೆ ಡಿಸೆಂಬರ್ 22 ರಂದು ನಡೆದಿದೆ. ಮುನಿಕೃಷ್ಣ, ತಮಿಳುನಾಡಿನ ಬಾಗ್ಲೂರಿನ ಅಜ್ಜಿ ಮನೆಗೆ ಹೋಗಿ, ಮಗುವಿಗೆ ವಿಷವನ್ನು ಕೊಟ್ಟಿದ್ದಾನೆ. ಘಟನೆ ನಂತರ ಬಾಯಿ ತೊಳೆಯುತ್ತಿದ್ದ. ಮಗುವಿನ ತಾಯಿ ಮತ್ತು ಅಜ್ಜಿ ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿತ್ತು.
ಇದನ್ನು ಓಇದ : ದಳಪತಿ ನಟನೆಯ ಕೊನೆಯ ಚಿತ್ರ Jana Nayagan ಟ್ರೇಲರ್ ರಿಲೀಸ್

ಜನ್ಮ ಸಂಬಂಧಿ ಕಾಯಿಲೆ
ಡಿಸೆಂಬರ್ 23ರಂದು ಮಗುವನ್ನು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುನಿಕೃಷ್ಣನಿಂದ ವಿಚಾರಣೆ ನಡೆಸಿದಾಗ, ಆತ ಒಪ್ಪಿಕೊಂಡಿದ್ದು, ಮಗುವಿಗೆ ಜನ್ಮ ಸಂಬಂಧಿ ಕಾಯಿಲೆ ಇದೆ ಮತ್ತು ಚಿಕಿತ್ಸೆಗೆ ಹಣವಿಲ್ಲದೆ ವಿಷವನ್ನು ಕೊಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.
ತನಿಖೆ ಪ್ರಾರಂಭ
ಇನ್ನು ಈ ಪ್ರಕರಣ ಸಂಬಂಧ, ಮಗುವಿನ ತಾಯಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಪ್ರಾರಂಭವಾಗಿದೆ.

ಇದನ್ನು ನೋಡಿ : ಮಗನ ಉದ್ಯೋಗ ಸಿಕ್ಕಿದ್ದಕ್ಕೆ ಸೊಸೆಯನ್ನೇ ಹತ್ಯೆಗೈದ ಅತ್ತೆ




