Jana Nayagan ಚಿತ್ರದ ಟ್ರೇಲರ್ ಬಿಡುಗಡೆ.

ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼ ಟ್ರೇಲರ್ ನೆನ್ನೆ ಸಂಜೆ ಬಿಡುಗಡೆಯಾಗಿದ್ದು, ಬಿಡುಗಡೆಗೊಂಡ ಕೇವಲ 5 ನಿಮಿಷಗಳಲ್ಲಿ 5 ಮಿಲಿಯನ್ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆದೊಂದಿಗೆ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ಸಂಚಲನ ಮೂಡಿದೆ.

ಯಾವಾಗ ಸಿನಿಮಾ ರಿಲೀಸ್
ಇನ್ನು Jana Nayagan ಟ್ರೇಲರ್ 2 ನಿಮಿಷ 52 ಸೆಕೆಂಡುಗಳದ್ದಾಗಿದ್ದು, ಅದ್ಭುತ ಆಕ್ಷನ್ ದೃಶ್ಯಗಳು, ಭಾವನಾತ್ಮಕ ಸನ್ನಿವೇಶಗಳು ಮತ್ತು ಸಂಗೀತದಿಂದ ಭರಿತವಾಗಿದೆ. ಪ್ರೇಕ್ಷಕರು ವಿಜಯ್ ಅವರ ಸ್ವಾಗ್ ಮತ್ತು ಚಿತ್ರದ ಭರ್ಜರಿ ಮೇಕಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಜನ ನಾಯಗನ್' ಸಿನಿಮಾ ಜನವರಿ 9 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ.
ಇದನ್ನು ಓದಿ : IPL 2026|ಬಾಂಗ್ಲಾದೇಶ್ನಲ್ಲಿ IPL ಬ್ಯಾನ್?

ದಳಪತಿ ವಿಜಯ್ ಕೊನೆಯ ಸಿನಿಮಾ
ಇದು ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಚಿತ್ರವಾಗಿರುವುದರಿಂದ ಅಭಿಮಾನಿಗಳಲ್ಲಿ ಭಾವನಾತ್ಮಕ ನಿರೀಕ್ಷೆಗಳು ಹೆಚ್ಚಾಗಿವೆ. ಜನ ನಾಯಗನ್ ಸಿನಿಮಾವನ್ನು ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದ್ದು, ಟ್ರೇಲರ್ ಮೂಲಕ ಈ ವಿಚಾರಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ನಂದಮೂರಿ ಬಾಲಕೃಷ್ಣ ಅವರ ಭಗವಂತ್ ಕೇಸರಿ ಚಿತ್ರದ ಭಾಗಶಃ ರಿಮೇಕ್ ಆಗಿರುವ ಜನ ನಾಯಗನ್, ಒಂದಷ್ಟು ಹೊಸ ವಿಚಾರಗಳನ್ನು ಒಳಗೊಂಡಿದೆ. ಜನ ನಾಯಗನ್ನಲ್ಲಿ ರಾಜಕೀಯಕ್ಕೆ ಮಹತ್ವ ನೀಡಲಾಗಿದೆ.

ಕಲಾವಿದರ ದಂಡು
ಈ ಚಿತ್ರದಲ್ಲಿ ದಳಪತಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದ ಕಲಾವಿದರ ದಂಡೇ ಇದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಮಾಡಿದ್ದು, ಅನಿರುದ್ಧ್ ಸಂಗೀತ ನೀಡಿದ್ದಾರೆ.

ಇದನ್ನು ನೋಡಿ : Bengaluru|ಓಡೋಡಿ ಬಂದ, ತಬ್ಬಿಕೊಂಡು ಕ್ರೌರ್ಯ! ಯುವ ವೈದ್ಯೆಗೆ ರಾತ್ರಿ ಕಾಮುಕನ ಟಾರ್ಚರ್




