Ballari ಫೈರಿಂಗ್ ಕೇಸ್ CID ತನಿಖೆಗೆ? ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಹತ್ವದ ಹೇಳಿಕೆ..

Ballari ಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಕೊಲೆ ಪ್ರಕರಣವನ್ನು CID ತನಿಖೆಗೆ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.
CID ತನಿಖೆ ಕುರಿತು ಸರ್ಕಾರದ ನಿಲುವು
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು,ಈ ಪ್ರಕರಣವನ್ನು CID ಅಥವಾ SIT ತನಿಖೆಗೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.
“ಈಗಾಗಲೇ ತನಿಖೆ ನಡೆಯುತ್ತಿದೆ. ಅಗತ್ಯವಿದ್ದರೆ CID ತನಿಖೆಗೆ ಒಪ್ಪಿಸಲಾಗುತ್ತದೆ”ಎಂದು ಪರಮೇಶ್ವರ್ ಹೇಳಿದರು.
ಖಾಸಗಿ ಗನ್ನಿಂದ ಫೈರಿಂಗ್?
ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವರು,ಪೊಲೀಸ್ ಗನ್ ಅಥವಾ ರಿವಾಲ್ವರ್ನಿಂದ ಫೈರ್ ಆಗಿಲ್ಲ ಎಂದು ADGP ಖಚಿತಪಡಿಸಿದ್ದಾರೆ ಎಂದು ಹೇಳಿದರು.
ಇನ್ನು,ಖಾಸಗಿ ಗನ್ನಿಂದ ಗುಂಡು ಹಾರಿಸಿರುವ ಸಾಧ್ಯತೆ ಇರುವುದರಿಂದ, ಪ್ರಕರಣವನ್ನು CID/SIT ತನಿಖೆಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಶಾಸಕ ಜನಾರ್ದನರೆಡ್ಡಿ ಪತ್ರ ವಿಚಾರ
ತಮ್ಮ ಕುಟುಂಬದ ಭದ್ರತೆ ಕೋರಿ ಶಾಸಕ ಜನಾರ್ದನರೆಡ್ಡಿ ಅವರು ಸಿಎಂ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್,
“ಆ ಪತ್ರ ಇನ್ನೂ ನನಗೆ ತಲುಪಿಲ್ಲ. ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಿಎಂ ಜೊತೆ ಜಮೀರ್ ಅಹ್ಮದ್ ಖಾನ್ ಚರ್ಚೆ
ತೋರಣಗಲ್ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ,ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಭರತ್ ರೆಡ್ಡಿ ಅವರುಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ,ಬಳ್ಳಾರಿ ಫೈರಿಂಗ್ ಘಟನೆ ಕುರಿತು ಮಾಹಿತಿ ನೀಡಿದರು.
ಇದಕ್ಕೂ ಮುನ್ನ, ಸಿಎಂ ಅವರು
- ಹೆಚ್ಚುವರಿ ಡಿಜಿಪಿ (ಕಾನೂನು ಸುವ್ಯವಸ್ಥೆ) ಹಿತೇಂದ್ರ
- ಬಳ್ಳಾರಿ ವಲಯ ಐಜಿ ವರ್ತಿಕಾ ಕಟಿಯಾರ್
- ದಾವಣಗೆರೆ ವಲಯ ಐಜಿ ರವಿಕಾಂತೇಗೌಡ
ಇವರಿಂದಲೂ ಘಟನೆ ಕುರಿತು ವಿವರ ಪಡೆದುಕೊಂಡಿದ್ದಾರೆ.
ಇದನ್ನು ಓದಿ : ಭೀಕರ ಕಾರು Accident – ಶಿಕ್ಷಕ ದಾರುಣ ಸಾವು

ಮೃತ ರಾಜಶೇಖರ್ ಕುಟುಂಬಕ್ಕೆ ನೆರವು
ಮೃತ ರಾಜಶೇಖರ್ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಭರತ್ ರೆಡ್ಡಿ ಹಾಗೂ ಕಂಪ್ಲಿ ಗಣೇಶ್ಒ ಟ್ಟಿಗೆ ಸೇರಿ ₹25 ಲಕ್ಷ ನಗದು ಪರಿಹಾರವನ್ನು ವೈಯಕ್ತಿಕವಾಗಿ ನೀಡಿದರು.

ಇದಲ್ಲದೆ,
- ಸ್ಲಂ ಬೋರ್ಡ್ ಮೂಲಕ ಮನೆ ಕಟ್ಟಿಸಿಕೊಡಲಾಗುವುದು
- ರಾಜಶೇಖರ್ ಅಣ್ಣನಿಗೆ ಉದ್ಯೋಗ ಒದಗಿಸುವ ಭರವಸೆ
ನೀಡಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಇದನ್ನು ನೋಡಿ : ಮರಕ್ಕೆ ಕಾರು ಡಿಕ್ಕಿಯಾಗಿ ಆಕ್ಸಿಡೆಂಟ್ – ಕಾರಿನಲ್ಲಿದ್ದ ಶಿಕ್ಷಕ ದಾರುಣ ಸಾ*




