ಸರ್ಕಾರ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರಥಮ ಪ್ರಯತ್ನದಲ್ಲಿಯೇ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ Incentive Money ನೀಡುತ್ತಿದೆ.

ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹವಾಗಿ Incentive Money ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ, ವಿವಿ ಹಂತದ ಶಿಕ್ಷಣವನ್ನು ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದಲ್ಲಿ ಆರ್ಥಿಕ ಸಹಾಯ ನೀಡಲಾಗುತ್ತದೆ.
ಇದನ್ನು ಓದಿ : ಕಾಲೇಜುಗಳಲ್ಲಿ ಮತ್ತೆ ಎಲೆಕ್ಷನ್ ಅಬ್ಬರ?
ಪ್ರೋತ್ಸಾಹ ಧನ ವಿವರಗಳು:
- ಎಸ್ ಎಸ್ ಎಲ್ ಸಿ:
- 60% – 75% ಶೇ.: ₹7,500
- 75% ಕ್ಕಿಂತ ಮೇಲ್ಪಟ್ಟು: ₹15,000
- ಪಿಯುಸಿ / ಡಿಪ್ಲೋಮೋ: ₹20,000
- ಪದವಿ: ₹25,000
- ಸ್ನಾತಕೋತ್ತರ ಪದವಿ: ₹30,000
- ವೃತ್ತಿಪರ ಪದವಿ (ವೈದ್ಯಕೀಯ/ತಾಂತ್ರಿಕ/ಕೃಷಿ/ಪಶು ವೈದ್ಯಕೀಯ): ₹35,000
- ವಿಶ್ವವಿದ್ಯಾಲಯ ಮಟ್ಟದಲ್ಲಿ PG ಕೋರ್ಸ್ಗಳಲ್ಲಿ 1 ರಿಂದ 5 ಬ್ಯಾಂಕ್ ಪಡೆದ ವಿದ್ಯಾರ್ಥಿಗಳು: ₹50,000
ಉನ್ನತ ಶಿಕ್ಷಣದತ್ತ ಉತ್ತೇಜನ
ಈ ಯೋಜನೆಯ ಮುಖ್ಯ ಉದ್ದೇಶ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉನ್ನತ ಶಿಕ್ಷಣದತ್ತ ಉತ್ತೇಜನ ನೀಡುವುದು ಮತ್ತು ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುವುದು. ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮತ್ತು ನಿರಂತರ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿದೆ.
ಆಸಕ್ತ ಅಭ್ಯರ್ಥಿಗಳು https://swd.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ನೋಡಿ : ‘ಸಾರಿ, ಸಾರಿ, ಸಾರಿ’; ಸುದೀಪ್ ಬಳಿ ಆರ್ಯವರ್ಧನ್ ಗುರೂಜಿ ಬಹಿರಂಗ ಕ್ಷಮೆ




