Kitchen Tips : ಪುಲಾವ್ ಎಂದರೆ ಎಲ್ಲರಿಗೂ ಇಷ್ಟ. ಆದರೆ ಸಾಮಾನ್ಯ ತರಕಾರಿ ಪುಲಾವ್ಗಿಂತ ಕಾಶ್ಮೀರಿ ಪುಲಾವ್ ಸ್ವಲ್ಪ ವಿಭಿನ್ನ ಮತ್ತು ವಿಶೇಷ. ಕೇಸರಿ, ಡ್ರೈ ಫ್ರೂಟ್ಸ್ಗಳ ಸುವಾಸನೆ ಹಾಗೂ ಸಿಹಿ-ಮಸಾಲೆಯ ಸಮತೋಲನ ಈ ಪುಲಾವ್ಗೆ ವಿಭಿನ್ನ ರುಚಿ ನೀಡುತ್ತದೆ.

Kitchen Tips : ಕಾಶ್ಮೀರಿಗರ ಮೆಚ್ಚಿನ ಈ ತಿನಿಸು ಟೊಮೆಟೊ ರಾಯಿತಾ, ಈರುಳ್ಳಿ ರಾಯಿತಾ ಅಥವಾ ಮಸಾಲಾ ಗ್ರೇವಿ ಜೊತೆ ಅದ್ಭುತ ಕಾಂಬಿನೇಷನ್.
ಇಗೋ, ರೆಸ್ಟೋರೆಂಟ್ ಸ್ಟೈಲ್ ಕಾಶ್ಮೀರಿ ಪುಲಾವ್ ಅನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ.
ಕಾಶ್ಮೀರಿ ಪುಲಾವ್ಗೆ ಬೇಕಾಗುವ ಸಾಮಾಗ್ರಿಗಳು
- ತುಪ್ಪ – 2 ಚಮಚ
- ಗೇರುಬೀಜ – 2 ಚಮಚ
- ಬಾದಾಮಿ – 2 ಚಮಚ
- ದ್ರಾಕ್ಷಿ – 2 ಚಮಚ
- ದಾಲ್ಚಿನ್ನಿ – 1 ಇಂಚು
- ಕಪ್ಪು ಏಲಕ್ಕಿ – 1
- ಲವಂಗ – ½ ಚಮಚ
- ಜೀರಿಗೆ – 1 ಚಮಚ
- ಪುಲಾವ್ ಎಲೆ (ಬೇ ಎಲೆ) – 1
- ಹೆಚ್ಚಿದ ಈರುಳ್ಳಿ – 1
- ತುರಿದ ಶುಂಠಿ – 1 ಚಮಚ
- ಸೋಂಪು – 1 ಚಮಚ
- ಏಲಕ್ಕಿ ಪುಡಿ – ½ ಚಮಚ
- ನೆನೆಸಿದ ಬಾಸ್ಮತಿ ಅಕ್ಕಿ – 1 ಕಪ್
- ನೀರು – 2 ಕಪ್
- ಉಪ್ಪು – 1 ಚಮಚ
- ಕೇಸರಿ ದಳ – ಸ್ವಲ್ಪ
- ದಾಳಿಂಬೆ ಕಾಳು – ಸ್ವಲ್ಪ
ಇದನ್ನು ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ ಆಸೀಸ್ ಬ್ಯಾಟರ್
ಕಾಶ್ಮೀರಿ ಪುಲಾವ್ ಮಾಡುವ ವಿಧಾನ
ಮೊದಲು ಒಂದು ಪ್ಯಾನ್ ಅಥವಾ ಕುಕ್ಕರ್ನಲ್ಲಿ ತುಪ್ಪ ಬಿಸಿ ಮಾಡಿ. ಬಿಸಿಯಾದ ತುಪ್ಪಕ್ಕೆ ಗೇರುಬೀಜ, ಬಾದಾಮಿ ಮತ್ತು ದ್ರಾಕ್ಷಿ ಹಾಕಿ ಮಂದ ಉರಿಯಲ್ಲಿ ಹುರಿದು ಬದಿಗೆ ತೆಗೆದುಿಡಿ.
ಅದೇ ತುಪ್ಪಕ್ಕೆ ದಾಲ್ಚಿನ್ನಿ, ಕಪ್ಪು ಏಲಕ್ಕಿ, ಲವಂಗ ಹಾಗೂ ಪುಲಾವ್ ಎಲೆ ಸೇರಿಸಿ. ಮಸಾಲೆಯ ಸುಗಂಧ ಬಂದ ಬಳಿಕ ಈರುಳ್ಳಿ ಮತ್ತು ಶುಂಠಿ ಹಾಕಿ, ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
ನಂತರ ಸೋಂಪು ಹಾಗೂ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನೆನೆಸಿದ ಬಾಸ್ಮತಿ ಅಕ್ಕಿ, ನೀರು ಮತ್ತು ಉಪ್ಪು ಹಾಕಿ ನಿಧಾನವಾಗಿ ಕದಡಿ. ನೀರು ಕುದಿಯಲು ಪ್ರಾರಂಭವಾದಾಗ ಕೇಸರಿ ದಳ ಸೇರಿಸಿ ಮುಚ್ಚಿ, ಗ್ಯಾಸ್ನ್ನು ಸ್ಲಿಮ್ ಮಾಡಿ ಸುಮಾರು 20 ನಿಮಿಷ ಬೇಯಿಸಿ.
ಅಕ್ಕಿ ಚೆನ್ನಾಗಿ ಬೆಂದ ನಂತರ, ಹುರಿದ ಡ್ರೈ ಫ್ರುಟ್ಸ್ ಸೇರಿಸಿ. ಮೇಲಿಂದ ದಾಳಿಂಬೆ ಕಾಳು ಎರಚಿ 5 ನಿಮಿಷ ಹಾಗೆಯೇ ಬಿಡಿ. ಈಗ ಸುವಾಸನೆಯ ರೆಸ್ಟೋರೆಂಟ್ ಸ್ಟೈಲ್ ಕಾಶ್ಮೀರಿ ಪುಲಾವ್ ಸವಿಯಲು ಸಿದ್ಧ.
ಸರ್ವಿಂಗ್ ಟಿಪ್ಸ್
ಕಾಶ್ಮೀರಿ ಪುಲಾವ್ ಅನ್ನು ಟೊಮೆಟೊ ರಾಯಿತಾ, ಈರುಳ್ಳಿ ರಾಯಿತಾ ಅಥವಾ ಸೌಮ್ಯ ಮಸಾಲಾ ಗ್ರೇವಿಯ ಜೊತೆ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
ಇದನ್ನು ನೋಡಿ : ಹೊಸ ವರ್ಷದಂದು ಕಂಠಪೂರ್ತಿ ಕಡಿದು ಕಾರು ಚಾಲನೆ: ಜನರ ಮೇಲೆ ಕಾರು ಹತ್ತಿಸಿದ ಭೂಪ, ನಾಲ್ವರಿಗೆ ಗಾಯ




