Crime News : ಮುಂಬೈನಲ್ಲಿ ಹೊಸ ವರ್ಷ 2026 ಸಂಭ್ರಮದ ನಡುವೆ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಸ ವರ್ಷಕ್ಕೆ ಸ್ವೀಟ್ ನೀಡುವ ನೆಪದಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಮಹಿಳೆ, ಆತನ ಖಾಸಗಿ ಅಂಗದ ಮೇಲೆ ಮಾರಕ ದಾಳಿ ನಡೆಸಿದ್ದಾಳೆ.

Crime News : 25 ವರ್ಷದ ವಿವಾಹಿತ ಮಹಿಳೆ ತನ್ನ 44 ವರ್ಷದ ಪ್ರಿಯಕರನಿಗೆ ಪತ್ನಿಯನ್ನು ಬಿಟ್ಟು ತನ್ನನ್ನೇ ಮದುವೆಯಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.
ಈ ವಿಷಯವೇ ಇಬ್ಬರ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದೇ ವೈಮನಸ್ಯದ ಹಿನ್ನೆಲೆಯಲ್ಲೇ ಡಿಸೆಂಬರ್ 31ರಂದು ಈ ಭೀಕರ ಕೃತ್ಯ ನಡೆದಿದೆ.
ಆರಂಭಿಕ ತನಿಖೆಯಲ್ಲಿ ದಾಳಿ ನಡೆಸಿದ ಮಹಿಳೆ ಮತ್ತು ಗಾಯಗೊಂಡ ವ್ಯಕ್ತಿ ಸಂಬಂಧಿಕರು ಎನ್ನುವುದು ಬಹಿರಂಗವಾಗಿದೆ. ಆರೋಪಿ ಮಹಿಳೆ, ಗಾಯಗೊಂಡವನ ಸಹೋದರಿಯ ಅತ್ತಿಗೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಕಳೆದ 6–7 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಪ್ರಿಯಕರ ಮಹಿಳೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಎಂದು ವರದಿಯಾಗಿದೆ.
ಇದನ್ನು ಓದಿ : Breaking |ಮಧುಗಿರಿಯಲ್ಲಿ Deadly Accident – ವಾಹನ ಸವಾರ ಸಾವು

ಸ್ವೀಟ್ ನೆಪದಲ್ಲಿ ಮನೆಗೆ ಕರೆಸಿ ದಾಳಿ
ಡಿಸೆಂಬರ್ 31ರಂದು ಮಹಿಳೆ, ಹೊಸ ವರ್ಷಕ್ಕೆ ಸ್ವೀಟ್ ಕೊಡ್ತೀನಿ ಎಂದು ಪ್ರಿಯಕರನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಆ ಸಮಯದಲ್ಲಿ ಮನೆಯಲ್ಲಿದ್ದ ಮಕ್ಕಳು ಮಲಗಿದ್ದರು.
ಬಳಿಕ ಮಹಿಳೆ ಪ್ರಿಯಕರನಿಗೆ ಪ್ಯಾಂಟ್ ತೆಗೆಯಲು ಹೇಳಿ, ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕು ತಂದು, ಅಕಸ್ಮಾತ್ತಾಗಿ ಖಾಸಗಿ ಅಂಗದ ಮೇಲೆ ದಾಳಿ ನಡೆಸಿದ್ದಾಳೆ.
ಆಸ್ಪತ್ರೆಗೆ ದಾಖಲಾತಿ, ಮಹಿಳೆ ಪರಾರಿ
ತೀವ್ರವಾಗಿ ಗಾಯಗೊಂಡ ವ್ಯಕ್ತಿ ಮನೆಗೆ ವಾಪಸ್ ಆದ ಬಳಿಕ, ಮಕ್ಕಳು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಮಹಿಳೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹೊಸ ವರ್ಷದ ಆಚರಣೆಯ ದಿನವೇ ನಡೆದ ಈ ಘಟನೆ, ಮುಂಬೈನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರೇಮ ಸಂಬಂಧದ ತೀವ್ರತೆ ಹೇಗೆ ಅಪರಾಧಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಇದನ್ನು ನೋಡಿ : ತುಮಕೂರಿಗೆ ಸಚಿವ PRIYANK KHARGE ದಿಢೀರ್ VISIT – ಯಾಕೆ ಬಂದ್ರು ಗೊತ್ತಾ..?




