2026 ರ ಸಿಇಟಿ ಪರೀಕ್ಷಾ ದಿನಾಂಕ ಘೋಷಣೆಯಾಗಿದೆ.

2026ರ ಕಾಮನ್ ಎಂಟ್ರಾನ್ಸ್ ಟೆಸ್ಟ್ (CET) ದಿನಾಂಕಗಳನ್ನು ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ವರ್ಷ CET ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ.
ಪರೀಕ್ಷಾ ವಿವರ
- ಏಪ್ರಿಲ್ 23: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ (ಪ್ರತಿ ವಿಷಯಕ್ಕೆ 60 ಅಂಕಗಳು)
- ಏಪ್ರಿಲ್ 24: ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ (ಪ್ರತಿ ವಿಷಯಕ್ಕೆ 60 ಅಂಕಗಳು)
- ಹೊರನಾಡು, ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏಪ್ರಿಲ್ 22 ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಕೆ
- ಆನ್ಲೈನ್ ಅರ್ಜಿ ಸಲ್ಲಿಕೆ ಜನವರಿ 17 ರಿಂದ ಪ್ರಾರಂಭವಾಗಲಿದೆ.
- CET ದಿಕ್ಸೂಚಿಯ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಪಷ್ಟ ಮಾರ್ಗದರ್ಶನ ದೊರಕಲಿದೆ.
- KEA ಕಚೇರಿ ಆಧುನೀಕರಣ ಹಾಗೂ ಸಭಾಂಗಣಗಳ ಉದ್ಘಾಟನೆ ಸಹ ಆಗುತ್ತಿದೆ.
ಇದನ್ನು ಓದಿ : ಗೃಹ ಪ್ರವೇಶದಲ್ಲಿ ವಿಶೇಷ ವ್ಯಕ್ತಿಯ ಫೋಟೋ ಇಟ್ಟು ಪೂಜೆ ಮಾಡಿದ Tarun-Sonal
ಇತರ ಪ್ರಮುಖ ಪ್ರವೇಶ ಪರೀಕ್ಷೆಗಳ ದಿನಾಂಕಗಳು
| ಪರೀಕ್ಷೆ | ದಿನಾಂಕ |
| KRIES ಆರನೇ ತರಗತಿಯ ಪ್ರವೇಶ ಪರೀಕ್ಷೆ | ಮಾರ್ಚ್ 1 |
| MBA, MCA PGCET | ಮೇ 14 |
| M.E/M.Tech PGCET | ಮೇ 23 |
| ಲ್ಯಾಟರಲ್ ಎಂಟ್ರಿ (DCET) ಇಂಜಿನಿಯರಿಂಗ್ ಕೋರ್ಸ್ | ಮೇ 23 |
| MSc ನರ್ಸಿಂಗ್, MPT, MSc AHS | ಜುಲೈ 18 |
| KSET | ಅಕ್ಟೋಬರ್ 11 |
| M-Pharma & M-Pharma D | ನವೆಂಬರ್ 21 |
ಡಾ. ಎಂ.ಸಿ. ಸುಧಾಕರ್ ಹಾಗೂ ಡಾ. ಶರಣ ಪ್ರಕಾಶ ಪಾಟೀಲರಿಂದ ಬಿಡುಗಡೆಗೊಂಡ CET ದಿಕ್ಸೂಚಿ, ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ, ಕೌನ್ಸೆಲಿಂಗ್ ಹಂತಗಳಲ್ಲಿ ತಪ್ಪು ತಪ್ಪಿಸುವಲ್ಲಿ ನೆರವಾಗಲಿದೆ. 3.75 ಲಕ್ಷ ಪ್ರತಿಗಳನ್ನು ಮುದ್ರಿಸಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು. ಇನ್ನು ಅಧಿಕೃತ ಮಾಹಿತಿಗಾಗಿ ವಿದ್ಯಾರ್ಥಿಗಳು KEA ವೆಬ್ಸೈಟ್ ಭೇಟಿ ಮಾಡುವಂತೆ ತಿಳಿಸಿದ್ದಾರೆ.
ಇದನ್ನು ನೋಡಿ : ಯಾರ ಮೇಲೂ ಗೂಬೆ ಕೂರಿಸಬಾರದು ಹೀಗ್ಯಾಕಂದ್ರು ಮಾಜಿ ಸಚಿವ ರಾಜಣ್ಣ..?




