ಹೊಸ ವರ್ಷಕ್ಕೆ ಸೋನಲ್ Tarun ಹೊಸ ಮನೆ ಗೃಹ ಪ್ರವೇಶ.

ಅಪಾರ್ಟ್ಮೆಂಟ್ ಒಂದರಲ್ಲಿ Tarun-Sonal ಜೋಡಿ ಮನೆಯನ್ನು ಖರೀದಿಸಿದೆ. ಪೂಜೆ ಮಾಡುವ ಮೂಲಕ ಮನೆಯನ್ನು ಪ್ರವೇಶ ಮಾಡಿದರು. Tarun ಅವರಿಗೆ ತಂದೆಯ ಮೇಲೆ ಅಪಾರ ಪ್ರೀತಿ. ಸುಧೀರ್ ಅವರು ಸಿನಿಮಾಗಳಲ್ಲಿ ಹಲವು ವರ್ಷಗಳ ಕಾಲ ವಿಲನ್ ಆಗಿ ಮಿಂಚಿದ್ದರು. ಈ ಕಾರಣದಿಂದ ಸುಧೀರ್ ಫೋಟೋವನ್ನು ಹೊಸ ಮನೆಯಲ್ಲಿ ದೊಡ್ಡದಾಗಿ ಹಾಕಲಾಗಿದೆ. ಇನ್ನು ಹೊಸ ಮನೆ ಖರೀದಿಸಿದ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.

ತಂದೆ ಮೇಲೆ ಅಪಾರ ಪ್ರೀತಿ
ತರುಣ್ ತಮ್ಮ ತಂದೆ ಸುಧೀರ್ ಮೇಲೆ ಅಪಾರ ಪ್ರೀತಿ ಹೊಂದಿದ್ದು, ಈ ಕಾರಣದಿಂದ ಅವರ ಫೋಟೋ ವಿಶೇಷವಾಗಿ ಮನೆ ಹಾಲ್ನಲ್ಲಿ ಪ್ರದರ್ಶಿಸಲಾಗಿದೆ. ಹೊಸ ಮನೆ ಪ್ರವೇಶದ ಹೋಮ ಮತ್ತು ಪೂಜಾ ವಿಧಿಗಳನ್ನು ತರುಣ್–ಸೋನಲ್ ನೆರವೇರಿಸಿದ್ದಾರೆ. ಸೋನಲ್ Social Media ದಲ್ಲಿ ಗೃಹ ಪ್ರವೇಶದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನನು ಓದಿ : ಚಿನ್ನ ಖರೀದಿಸುವವರಿಗೆ ಬಿಗ್ ಶಾಕ್! ಮತ್ತಷ್ಟು ಏರಿಕೆಯಾದ ಗೋಲ್ಡ್ ರೇಟ್

ಸೆಲೆಬ್ರಿಟಿಗಳು ಭಾಗಿ
ಇನ್ನು ಸೆಲೆಬ್ರಿಟಿಗಳು ಸಹ ಈ ಸಂದರ್ಭದಲ್ಲಿ ಆಗಮಿಸಿ ದಂಪತಿಗೆ ಶುಭಕೋರಿದ್ದಾರೆ. ತರುಣ್ ಕುಟುಂಬದ ಗೆಳೆಯ ಶರಣ್ ಕೂಡ ಈ ಸಂಭ್ರಮಕ್ಕೆ ಹಾಜರಾಗಿದ್ದು, ದಂಪತಿಗೆ ಶುಭಕೋರಿದ್ದಾರೆ. ಶ್ರುತಿ ಮತ್ತು ಅವರ ಕುಟುಂಬವೂ ಈ ಹೋಮದಲ್ಲಿ ಭಾಗವಹಿಸಿದ್ದರು.

ಧರ್ಮ ಪಾಲಿಸುತ್ತಿದ್ದಾರೆ ಸೋನಲ್
ಹೊಸ ಮನೆ ಪ್ರವೇಶಿಸುವಾಗ ಹಾಲುಕ್ಕಿಸೋ ಸಂಪ್ರದಾಯ ಇದೆ. ಸೋನಲ್ ಕೂಡ ಇದನ್ನು ಪಾಲಿಸಿದ್ದಾರೆ. ಅವರು ಮದುವೆ ಬಳಿಕ ಹಿಂದೂ ಧರ್ಮವನ್ನು ಪಾಲಿಸುತ್ತಾ ಇದ್ದಾರೆ. ಹಿಂದೂ ಸಂಪ್ರದಾಯಗಳನ್ನು ಇಷ್ಟಪಟ್ಟು ಅನುಸರಿಸುತ್ತಿದ್ದಾರೆ.

ಇದನ್ನು ನೋಡಿ : ಹೊಸ ವರ್ಷಕ್ಕೆ ಸ್ವೀಟ್ ಕೊಡ್ತೀನಿ ಅಂತ ಕರೆಸಿ ಪ್ರಿಯಕರನ ಖಾಸಗಿ ಅಂಗವನ್ನೇ ಕತ್ತರಿಸಿದ ಮಹಿಳೆ!




