Bengaluru : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಪವಿತ್ರಾ ಗೌಡ (Pavitra Gowda) ಸೇರಿ ಮೂವರಿಗೆ ಮನೆಯೂಟಕ್ಕೆ ಅವಕಾಶ ನೀಡಿ, ಕೋರ್ಟ್ ಆದೇಶ ನೀಡಿದೆ.

Bengaluru : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿ ಇರುವ ಆರೋಪಿ ಪವಿತ್ರಾ ಗೌಡ ಸೇರಿ ಮೂವರಿಗೆ ದಿನಕ್ಕೆ ಒಮ್ಮೆ ಮನೆಯೂಟ ನೀಡಲು ನ್ಯಾಯಾಲಯ ಆದೇಶ ನೀಡಿದೆ.
ಜೈಲು ಊಟ ಸರಿಯಿಲ್ಲವೆಂದ ಆರೋಪ – ಮನೆಯೂಟಕ್ಕೆ ಅವಕಾಶ ನೀಡಿದ ನ್ಯಾಯಾಲಯ
ಜೈಲಿನಲ್ಲಿ ಸಿಗುವ ಆಹಾರ ಸಮರ್ಪಕವಾಗಿಲ್ಲ, ಇದರಿಂದ ಅನಾರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದೇ ರೀತಿಯ ಮನವಿಯನ್ನು ಆರೋಪಿಗಳಾದ ನಾಗರಾಜು ಹಾಗೂ ಲಕ್ಷ್ಮಣ್ ಕೂಡ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಾಲಯ, ಮೂವರು ಆರೋಪಿಗಳಿಗೆ ದಿನಕ್ಕೆ ಒಂದು ಬಾರಿ ಮನೆಯೂಟ ನೀಡಲು ಅವಕಾಶ ಕಲ್ಪಿಸಿದೆ.
ರೇಣುಕಾಸ್ವಾಮಿ ತಾಯಿ ಹೇಳಿಕೆಯಲ್ಲಿ ವ್ಯತ್ಯಾಸ
ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಈಗಾಗಲೇ ರೇಣುಕಾಸ್ವಾಮಿ ತಂದೆ ಹಾಗೂ ತಾಯಿಯ ಸಾಕ್ಷ್ಯ ದಾಖಲಿಸಲಾಗುತ್ತಿದೆ. ಇದೇ ಹಂತದಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪ್ರತಿಕೂಲ ಸಾಕ್ಷ್ಯವಾಗಿ ಪರಿಗಣಿಸಲು ಎಸ್ಪಿಪಿ ಮನವಿ
ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿದ್ದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, ತಮ್ಮ ಹಿಂದಿನ ಹೇಳಿಕೆಗೂ ಇತ್ತೀಚಿನ ಹೇಳಿಕೆಗೂ ವ್ಯತ್ಯಾಸವಿರುವಂತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರತಿಕೂಲ ಸಾಕ್ಷ್ಯ (ಹೋಸ್ಟೈಲ್ ವಿಟ್ನೆಸ್) ಎಂದು ಪರಿಗಣಿಸುವಂತೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್ಪಿಪಿ) ಪ್ರಸನ್ನಕುಮಾರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಸೆಷನ್ಸ್ ಕೋರ್ಟ್ನಲ್ಲಿ ಚಾರ್ಜ್ ಫ್ರೇಮ್
ಎಸ್ಪಿಪಿ ಸಲ್ಲಿಸಿರುವ ಈ ಮನವಿಯ ಬಗ್ಗೆ ನ್ಯಾಯಾಲಯವು ಸೋಮವಾರ (ಜನವರಿ 5) ತೀರ್ಮಾನ ಕೈಗೊಳ್ಳಲಿದೆ. ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆಯೇ ಈ ಬೆಳವಣಿಗೆಗಳು ಗಮನ ಸೆಳೆದಿವೆ.

MUST WATCH : ಅಭಿಮಾನಿಗಳಿಗೆ ಜೈಲಿನಿಂದಲೇ ದಚ್ಚು LETTER




