Renukaswamy Murder Case : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್ನಲ್ಲಿ ಚಾರ್ಜ್ ಫ್ರೇಮ್ ಮಾಡಲಾಗುತ್ತೆ.

Renukaswamy Murder Case : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್ನಲ್ಲಿ ಚಾರ್ಜ್ ಫ್ರೇಮ್ (Charge Frame) ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳು ಖುದ್ದಾಗಿ ಹಾಜರಾಗಲು ಕೋರ್ಟ್ ಸೂಚನೆ ನೀಡಿದೆ.
ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಹಾಜರು
ಕೋರ್ಟ್ ಆದೇಶದಂತೆ ಜೈಲು ಅಧಿಕಾರಿಗಳು ಇಂದು ಈ ಕೆಳಗಿನ 17 ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ:
- ದರ್ಶನ್
- ಪವಿತ್ರಾ ಗೌಡ
- ನಂದೀಶ್
- ಕೇಶವಮೂರ್ತಿ
- ಪವನ್
- ರಾಘವೇಂದ್ರ
- ಧನುಷ್
- ಧನರಾಜು
- ವಿನಯ್
- ಪ್ರದೂಷ್ ಮತ್ತು ಇತರರು ಸೇರಿ ಒಟ್ಟು 17 ಮಂದಿ ಆರೋಪಿಗಳು
ಇದನ್ನು ಓದಿ : ದಿನಭವಿಷ್ಯ 3 ನವೆಂಬರ್ 2025: ಇಂದು ಕಾರ್ತಿಕ ಸೋಮವಾರ

ಚಾರ್ಜ್ ಫ್ರೇಮ್ ಪ್ರಕ್ರಿಯೆ
ನ್ಯಾಯಾಧೀಶರು ಪ್ರತಿಯೊಬ್ಬ ಆರೋಪಿಯಿಗೂ ಅವರ ಮೇಲೆ ಇರುವ ಆರೋಪಗಳ ಕುರಿತು ವಿವರ ನೀಡಲಿ ದ್ದಾರೆ.ಆರೋಪಿತರು ಆರೋಪಗಳನ್ನು ಒಪ್ಪುತ್ತಾರೆಯೇ ಅಥವಾ ವಿರೋಧಿಸುತ್ತಾರೆಯೇ ಎಂಬುದನ್ನು ಕೋರ್ಟ್ನಲ್ಲಿ ದಾಖಲಿಸಲಾಗುತ್ತದೆ. ಆ ನಂತರ ನ್ಯಾಯಾಧೀಶರು ಪ್ರಕರಣದ ಮುಂದಿನ ಹಂತದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಹಲವರು ಬಂಧಿತರಾಗಿದ್ದಾರೆ.
ಇದನ್ನು ನೋಡಿ : ರೇಣುಕಾಸ್ವಾಮಿ ಕೊಲೆ ಕೇಸ್ – ದರ್ಶನ್, ಪವಿತ್ರಾ ಸೇರಿ ಎಲ್ಲಾ ಆರೋಪಿಗಳಿಗಿಂದು ಬಿಗ್ ಡೇ!




