ಬೆಟ್ಟಿಂಗ್ ಆ್ಯಪ್ ಕೇಸ್ ನಲ್ಲಿ ಇ.ಡಿ.ಯಿಂದ ಬಂಧನಕ್ಕೊಳಗಾಗಿದ್ದ ಶಾಸಕ Veerendra Puppy ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಅಕ್ರಮ ಹಣ ವರ್ಗಾವಣೆ ಹಾಗೂ ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವಂತೆ ಆದೇಶ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಶಾಸಕ Veerendra Puppy ಯನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಇಂದು ಕೋರ್ಟ್ ಜಾಮೀನು ನೀಡುವಂತೆ ಆದೇಶ ಹೊರಡಿಸಿದೆ.
ಇದನ್ನು ಓದಿ : ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಪತಿ ಒತ್ತಡ – ಪತ್ನಿ ದೂರು

55 ಕೋಟಿ ಹಣವ ಫ್ರೀಜ್
ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣದ ತನಿಖೆ ವೇಳೆ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿಯನ್ನು ಬಂಧಿಸಿದ್ದರು. ದಾಳಿ ನಡೆಸಿದ ಬಳಿಕ, ಪಪ್ಪಿಯ ಬ್ಯಾಂಕ್ ಖಾತೆಗಳಿಂದ ಒಟ್ಟು 55 ಕೋಟಿ ರೂಪಾಯಿ ನಗದು ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಇಡಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು.
ಸುಮಾರು 40.69 ಕೋಟಿ ರೂ. ಪತ್ತೆ
ತನಿಖೆಯ ವೇಳೆ ಕೆ.ಸಿ. ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿ ಸುಮಾರು 40.69 ಕೋಟಿ ರೂ. ಪತ್ತೆಯಾಗಿದ್ದು, ಜೊತೆಗೆ 262 ಮ್ಯೂಲ್ ಖಾತೆಗಳಲ್ಲಿ ಸುಮಾರು 14.46 ಕೋಟಿ ರೂ. ಹಣ ಇರುವುದನ್ನು ಇಡಿ ಗುರುತಿಸಿದೆ. ಈ ಮೂಲಕ ಒಟ್ಟು 55 ಕೋಟಿ ರೂಪಾಯಿ ಮೊತ್ತವನ್ನು ಜಪ್ತಿ ಮಾಡಲಾಗಿದೆ.

5 ಐಷಾರಾಮಿ ಕಾರುಗಳು ವಶ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಐಷಾರಾಮಿ ಕಾರುಗಳನ್ನೂ ಇಡಿ ವಶಪಡಿಸಿಕೊಂಡಿದೆ. ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ವೀರೇಂದ್ರ ಪಪ್ಪಿ ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದನ್ನು ನೋಡಿ : ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಮೋಸ




