Hassan : ಖಾಸಗಿ ಆಸ್ಪತ್ರೆ ಎದುರು ರಕ್ತ ಸಂಬಂಧಿಗಳ ಜಗಳ.

ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರಕ್ಕೆ ಅಕ್ಕ ಹಾಗೂ ತಮ್ಮನ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಆಸ್ಪತ್ರೆ ಆವರಣದಲ್ಲೇ ಹೊಡೆದಾಡಿಕೊಂಡಿರೋ ಘಟನೆ Hassan ನಗರದಲ್ಲಿ ನಡೆದಿದೆ. ಹಾಸನ ನಗರದ ಆರ್.ಸಿ ರಸ್ತೆಯಲ್ಲಿರೋ ಖಾಸಗಿ ಆಸ್ಪತ್ರೆಯಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ತಾಯಿಯನ್ನು ನೋಡಲು ಬಂದಂತಹ ವೇಳೆ ಗಲಾಟೆ ನಡೆದಿದೆ.

ತಾಯಿಯ ಚಿಕಿತ್ಸೆಗೆ ವಿಚಾರಕ್ಕೆಅಕ್ಕ-ತಮ್ಮನ ನಡುವೆ ಗಲಾಟೆ
ಹಾಸನ ತಾಲೂಕಿನ ಹಳೆ ಕೊಪ್ಪಲಿ ಗ್ರಾಮದ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಹಾಸನ ಖಾಸಗಿ ಆಸ್ಪತ್ರೆಗೆ ಆಕೆಯ ಮಗಳು ದಾಖಲಿಸಿದ್ದಳು. ಈ ವೇಳೆ ಮಹಿಳೆಯನ್ನು ನೋಡಲು ಆಕೆಯ ಮಗ ಆಸ್ಪತ್ರೆಗೆ ಬಂದಿದ್ದ.. ಈ ವೇಳೆ ಅಕ್ಕ ಹಾಗೂ ತಮ್ಮನ ನಡುವೆ ಮಾತಿನ ಚಕಮಕಿ ನಡೆದಿತ್ತು. ಗಲಾಟೆಗೆ ಎರಡು ಕುಟುಂಬಗಳ ಸದಸ್ಯರು ಮಧ್ಯಪ್ರವೇಶಿಸಿದ್ದು, ಆಸ್ಪತ್ರೆ ಆವರಣದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕೈ ಮಿಲಾಯಿಸಿ ಕೊಂಡಿದ್ದಾರೆ.
ಇದನ್ನು ಓದಿ : ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ಮಾರ್ಕ್ ನೋಡ್ತಾರೆ ಸುದೀಪ್

ಮಹಿಳೆಯ ಜಡೆ ಹಿಡಿದು ಎಳೆದಾಡಿದ ಸಂಬಂಧಿಕರು
ಇನ್ನು ಮಹಿಳೆಯ ಜಡೆಯನ್ನು ಹಿಡಿದು ಎಳೆದಾಡಿ, ಹಲ್ಲೆ ಮಾಡಿದ್ದಾರೆ. ಅಲ್ದೇ ಮಹಿಳೆಯ ಕಪಾಳಕ್ಕೂ ಕೂಡ ಹೊಡೆದಿದ್ದು, ಗಂಡಸಲು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದು ಗಲಾಟೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಇದನ್ನು ನೋಡಿ : ಟ್ರೋಲ್ ಮಾಡಿದ್ದಕ್ಕೆ ಅನುಶ್ರೀ ಗರಂ.. ಖಡಕ್ ಉತ್ತರ, ಅಸಲಿಗೆ ಆಗಿದ್ದೇನು..?




