Madhu Bangarappa : ಒಂದೇ ಒಂದು ಮಗು ಇದ್ದರೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ, ವಿಲೀನವೂ ಮಾಡುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸ್ಪಷ್ಟವಾಗಿ ಹೇಳಿದ್ದಾರೆ.

Madhu Bangarappa : ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಸರ್ಕಾರಕ್ಕೆ ಮಾಡಿದ ಮನವಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಶಾಲೆಗಳ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.
“ಶಾಲೆ ಮುಚ್ಚೋ ಅಧಿಕಾರ ನಮಗೆ ಇಲ್ಲ”
ವಿಧಾನಸೌಧದಲ್ಲಿ ಮಾತನಾಡಿದ ಮಧು ಬಂಗಾರಪ್ಪ,
“ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಅಧಿಕಾರ ನಮಗೆ ಇಲ್ಲ. ನಾವು ವಿಲೀನ ಮಾಡೋದಿಲ್ಲ. ಒಂದೇ ಮಗು ಇದ್ದರೂ ಶಾಲೆ ಮುಚ್ಚೋದಿಲ್ಲ”
ಎಂದು ಪುನರುಚ್ಚಾರ ಮಾಡಿದರು.
ಈ ಕುರಿತು ಬರಗೂರು ರಾಮಚಂದ್ರಪ್ಪ ಅವರಿಗೆ ಈಗಾಗಲೇ ಸ್ಪಷ್ಟ ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದರು.
ಟೀಚರ್, ಮಧ್ಯಾಹ್ನದ ಊಟ ಖಚಿತ
ಮಧು ಬಂಗಾರಪ್ಪ ಅವರು ಮುಂದುವರೆದು,
“ಒಂದು ಮಗು ಇದ್ದರೂ ಟೀಚರ್ ಇರುತ್ತಾರೆ, ಮಧ್ಯಾಹ್ನದ ಊಟವೂ ಇರುತ್ತದೆ. ಸರ್ಕಾರಿ ಶಾಲೆ ಮುಚ್ಚುತ್ತಾರೆ ಅಂತ ಯಾರು ಹೇಳಿದ್ರು ಅದಕ್ಕೆ ನಾನು ಹೊಣೆಗಾರನಲ್ಲ”
ಎಂದು ಹೇಳಿದರು.
KPS ಶಾಲೆಗಳ ಬಗ್ಗೆ ಸಚಿವರ ನಿಲುವು
KPS (Karnataka Public Schools) ಯೋಜನೆ ಕುರಿತು ಮಾತನಾಡಿದ ಅವರು,
- KPS ಒಳ್ಳೆಯ ಪ್ರಾಜೆಕ್ಟ್
- ಗುಣಮಟ್ಟದ ಶಿಕ್ಷಣ ಸಿಗಲಿದೆ
- ಈ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ
ಎಂದು ಸ್ಪಷ್ಟಪಡಿಸಿದರು.
ಉತೀರ್ಣ ಅಂಕ ಕಡಿಮೆ ಮಾಡಿರುವುದಕ್ಕೆ ಬರಗೂರು ರಾಮಚಂದ್ರಪ್ಪ ಅವರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ,
“ಬೇರೆ ರಾಜ್ಯಗಳಲ್ಲಿ ಏನಿದೆ ಎಂದು ನೋಡಿ ಬಂದರೆ ಉತ್ತರ ಸಿಗುತ್ತದೆ”
ಎಂದರು.
ಇದನ್ನು ಓದಿ : ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ಮಾರ್ಕ್ ನೋಡ್ತಾರೆ ಸುದೀಪ್
ವಿಲೀನ ಹೇಳಿದ ಅಧಿಕಾರಿಗೆ ಅಮಾನತು ಎಚ್ಚರಿಕೆ
ಶಾಲೆ ವಿಲೀನದ ಬಗ್ಗೆ BEO ಯಾರಾದರೂ ಹೇಳಿದ್ದರೆ,
“ಅವರನ್ನು ಕರೆದುಕೊಂಡು ಬಂದರೆ ಅಮಾನತು ಮಾಡ್ತೀನಿ”
ಎಂದು ಸಚಿವರು ಕಠಿಣ ಎಚ್ಚರಿಕೆ ನೀಡಿದರು.
ಸರ್ಕಾರವೇ ಸ್ಪಷ್ಟವಾಗಿ “ಶಾಲೆ ಕ್ಲೋಸ್ ಮಾಡಲ್ಲ” ಎಂದು ಹೇಳುತ್ತಿರುವಾಗ ಇಂತಹ ಮಾತುಗಳು ಎಲ್ಲಿಂದ ಬರುತ್ತಿವೆ ಎಂದು ಪ್ರಶ್ನಿಸಿದರು.
ಉಚಿತ, ಗುಣಮಟ್ಟದ ಶಿಕ್ಷಣ ಸರ್ಕಾರದ ಗ್ಯಾರಂಟಿ
ಮಧು ಬಂಗಾರಪ್ಪ ಹೇಳಿದರು,
“ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಕೊಡೋದು ನಮ್ಮ ಸರ್ಕಾರದ ಗ್ಯಾರಂಟಿ. ಮಕ್ಕಳನ್ನಿಟ್ಟುಕೊಂಡು ಆಟ ಆಡೋದು ಬೇಡ”
ಇದರ ಹಿಂದೆ ಕೆಲ ಖಾಸಗಿ, ವ್ಯವಹಾರಿಕ ಶಿಕ್ಷಣ ಸಂಸ್ಥೆಗಳ ಪ್ರಭಾವ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.
ಇದನ್ನು ನೋಡಿ : ಟ್ರೋಲ್ ಮಾಡಿದ್ದಕ್ಕೆ ಅನುಶ್ರೀ ಗರಂ.. ಖಡಕ್ ಉತ್ತರ, ಅಸಲಿಗೆ ಆಗಿದ್ದೇನು..?




