Hubballi : ಝೀರೋ ಟ್ರಾಫಿಕ್ (Zero Traffic) ವ್ಯವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಬೇಸರ ಮೂಡಿಸಿದೆ.

Hubballi : ಹೊಟ್ಟೆ ಭಾಗದಲಿ ಗಂಭೀರ ಸಮಸ್ಯೆ
ವಿಜಯಲಕ್ಷ್ಮಿ ಎಂಬ ಮಹಿಳೆಗೆ ಜನಿಸಿದ ಮಗುವಿಗೆ ಹೊಟ್ಟೆ ಮೇಲಿನ ಚರ್ಮ ಬೆಳೆಯದೆ, ಕರುಳು ಹಾಗೂ ಕಿಡ್ನಿ ಹೊರಬಂದ ಸ್ಥಿತಿಯಲ್ಲಿ ಜನನವಾಗಿತ್ತು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣ ಚಿಕಿತ್ಸೆ ಅಗತ್ಯವಿತ್ತು.
ಝೀರೋ ಟ್ರಾಫಿಕ್ನಲ್ಲಿ ಕಿಮ್ಸ್ ಆಸ್ಪತ್ರೆಗೆ ರವಾನೆ
ಕೊಪ್ಪಳ ಜಿಲ್ಲೆಯ ಕುಕುನೂರ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ವಿಜಯಲಕ್ಷ್ಮಿ ಅವರಿಗೆ ಜನವರಿ 27ರ ರಾತ್ರಿ ಮಧ್ಯರಾತ್ರಿ ಹೆರಿಗೆ ನಡೆದಿತ್ತು.
ಮೊದಲಿಗೆ ಕುಕುನೂರ ತಾಲೂಕಾ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿ, ನಂತರ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.
ಇದನ್ನು ಓದಿ : ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ಮಾರ್ಕ್ ನೋಡ್ತಾರೆ ಸುದೀಪ್
ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಜನವರಿ 28ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕರೆತರಲಾಯಿತು.
ಅಂಬುಲೆನ್ಸ್ ಬಳಕೆ ಮಾಡಿದರೂ ವಿಫಲ
ನವಜಾತ ಶಿಶುವನ್ನು ಬೇಗನೆ ಆಸ್ಪತ್ರೆಗೆ ತಲುಪಿಸಲು ಅಂಬುಲೆನ್ಸ್ಗಳನ್ನು ಬಳಸಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಆದರೂ ವೈದ್ಯರ ಸರ್ವಪ್ರಯತ್ನಗಳ ನಡುವೆಯೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮಗುವಿನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದರೂ ಮಗು ಉಳಿಯದೇ ಹೋಗಿರುವುದು ಎಲ್ಲರ ಮನಕಲಕುವಂತಾಗಿದೆ.
ಇದನ್ನು ನೋಡಿ : ಟ್ರೋಲ್ ಮಾಡಿದ್ದಕ್ಕೆ ಅನುಶ್ರೀ ಗರಂ.. ಖಡಕ್ ಉತ್ತರ, ಅಸಲಿಗೆ ಆಗಿದ್ದೇನು..?




