ಕಿಚ್ಚ ಸುದೀಪ್ ಅವರು Mark ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜಪತೆ ಸಿನಿಮಾ ವೀಕ್ಷಿಸಲಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡೋದನ್ನು ನಿಲ್ಲಿಸಿ ಬಹಳ ಸಮಯ ಕಳೆದಿದೆ. ನೂಕು ನುಗ್ಗಲು ಉಂಟಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಅವರು ಅವಾಯ್ಡ್ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಮಾರ್ಕ್’ ಚಿತ್ರದ ಯಶಸ್ಸಿನ ಬಳಿಕ ಅವರು ಅಭಿಮಾನಿಗಳ ಜೊತೆ ಚಿತ್ರ ನೋಡಲು ನಿರ್ಧರಿಸಿದ್ದಾರೆ.
ಅಭಿಮಾನಿಗಳ ಜೊತೆ ಮಾರ್ಕ್ ನೋಡ್ತಾರೆ ಕಿಚ್ಚ
ನಾಳೆ ಸುದೀಪ್ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಶೋ ವೀಕ್ಷಿಸಲಿದ್ದಾರೆ. ಈ ಶೋ ಪೂರ್ಣಗೊಂಡ ಬಳಿಕ ಅವರು ನೇರವಾಗಿ ಮೈಸೂರಿಗೆ ತೆರಳಿ, ಸಂಗಮ ಚಿತ್ರಮಂದಿರದಲ್ಲಿ ಸಂಜೆ 4.30ಕ್ಕೆ ಅಭಿಮಾನಿಗಳೊಂದಿಗೆ ‘ಮಾರ್ಕ್’ ಚಿತ್ರ ವೀಕ್ಷಿಸಲಿದ್ದಾರೆ.
ಇದನ್ನು ಓದಿ : ರಶ್ಮಿಕಾ-ವಿಜಯ್ ಮದುವೆ ಮುಹೂರ್ತ ಫಿಕ್ಸ್
ಅಭಿಮಾನಿಗಳೊಂದಿಗೆ ವಿಶೇಷ ಶೋ
ಕಳೆದ ವರ್ಷ ಡಿಸೆಂಬರ್ 25ರಂದು ಬಿಡುಗಡೆಯಾದ ‘ಮ್ಯಾಕ್ಸ್’ ಚಿತ್ರದ ವೇಳೆ ಅವರು ಪತ್ನಿ ಪ್ರಿಯಾ, ನಿರ್ದೇಶಕ ವಿಜಯ್ ಕಾರ್ತಿಕೇಯ, ಗಾಯಕ ವಿಜಯ್ ಪ್ರಕಾಶ್ ಹಾಗೂ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ್ದರು. ಇದೀಗ, ‘ಮಾರ್ಕ್’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಇದೇ ರೀತಿಯಾಗಿ ಅಭಿಮಾನಿಗಳೊಂದಿಗೆ ವಿಶೇಷ ಶೋ ಆಯೋಜಿಸಲಾಗಿದೆ.
ಕಲೆಕ್ಷನ್ ಎಷ್ಟು?
ಇನ್ನು Mark ಚಿತ್ರ ಡಿಸೆಂಬರ್ 25ರಂದು ಬಿಡುಗಡೆಯಾಗಿ, ಕೇವಲ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಸುಪರ್ ಹಿಟ್ ಆಗಿದೆ.
ಇದನ್ನು ನೋಡಿ : ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು

