Dharmastahala ದಲ್ಲಿ 2026ರ ಎಪ್ರಿಲ್ 29ರಂದು 54ನೇ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29 ರಂದು ಸಂಜೆ 6:40 ಗಂಟೆಗೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತೀ ಜಾತಿಯ ವಧು-ವರರು ತಮ್ಮ ಸಂಪ್ರದಾಯದಂತೆ ಒಂದೇ ಸಮಯದಲ್ಲಿ ವಿವಾಹವಾಗುವ ಅವಕಾಶ ಪಡೆಯುತ್ತಾರೆ.
ಸುಖಶಾಂತಿಯ ಜೀವನ
ಈ ಕಾರ್ಯಕ್ರಮದ ಮೂಲಕ ಧರ್ಮಸ್ಥಳವು ಮದುವೆಯ ದುಂದು ವೆಚ್ಚವನ್ನು ತಡೆಯುವ ಮತ್ತು ವಧು-ವರರಿಗೆ ಸುಖಶಾಂತಿಯ ಜೀವನವನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಭರಿಸುತ್ತಿದ್ದಾರೆ.
ವಧು-ವರರ ತಂದೆ-ತಾಯಿ ಹಾಜರಿರುವುದು ಕಡ್ಡಾಯ
ವಿಶೇಷವಾಗಿ, ಎರಡು ವಿವಾಹಕ್ಕೆ ಅವಕಾಶ ಇಲ್ಲ ಮತ್ತು ವಧು-ವರರ ತಂದೆ-ತಾಯಿ ಹಾಜರಿರುವುದು ಕಡ್ಡಾಯ. ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿ ಪತ್ರವನ್ನು ಸಲ್ಲಿಸಬೇಕು. ವರ-ವಧುಗಳಿಗೆ ಧೋತಿ, ಶಾಲು, ಸೀರೆ, ರವಿಕೆ, ಕಣ, ಮಂಗಳಸೂತ್ರ ಹಾಗೂ ಹೂವಿನ ಹಾರ ನೀಡಲಾಗುತ್ತದೆ.
ಇದನ್ನು ಓದಿ : ತನ್ನದೇ ವರ್ಲ್ಡ್ ರೆಕಾರ್ಡ್ ಮುರಿದ ಸ್ಮೃತಿ ಮಂಧಾನ
ಉಚಿತ ಸಾಮೂಹಿಕ ವಿವಾಹ
ವರದಕ್ಷಿಣೆ ಹಾಗೂ ಮದುವೆಗೆ ಆಗುವ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. ಈ ತನಕ ಒಟ್ಟು 13 ಸಾವಿರ ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ ಶಾಂತಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲು ಇಚ್ಛಿಸುವವರು 2026ರ ಏಪ್ರಿಲ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 08256-266644, 9663464648, 8147263422 ಗೆ ಸಂಪರ್ಕಿಸಬಹುದು.
ಇದನ್ನು ನೋಡಿ : Bidar|99 ಲಕ್ಷ ಸಾಲ ಪಡೆದು ವಂಚನೆ ಆರೋಪ; ಬಿಜೆಪಿ ಶಾಸಕನ ವಿರುದ್ಧ FIR ದಾಖಲು




