ವುಮೆನ್ಸ್ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ Smriti Mandhana ಅವರ ಪರಾಕ್ರಮ ಮುಂದುವರೆದಿದೆ.

ಭಾರತ ಕ್ರಿಕೆಟ್ ಟೀಮ್ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಮಹಿಳಾ ಅಂತಾರಾಷ್ಟ್ರೀಯ ಅದು ಕೂಡ ತನ್ನದೇ ಹೆಸರಿನಲ್ಲಿದ್ದ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದೇ ವಿಶೇಷ.

ಹಿಂದಿನ ವರ್ಷದ ದಾಖಲೆಯನ್ನು ಮುರಿದಿದ್ದಾರೆ
2024 ರಲ್ಲಿ 35 ಇನಿಂಗ್ಸ್ನಲ್ಲಿ 1,659 ರನ್ಗಳೊಂದಿಗೆ ವಿಶ್ವದ ಅತಿದೊಡ್ಡ ಒಟ್ಟಾರೆ ರನ್ಗಳ ದಾಖಲೆಯನ್ನು ನಿರ್ಮಿಸಿದ್ದ ಸ್ಮೃತಿ, ಈಗ 32 ಇನಿಂಗ್ಸ್ನಲ್ಲಿ 1,703 ರನ್ಗಳನ್ನು ಕಲೆಹಾಕಿ, ಹಿಂದಿನ ವರ್ಷದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ವರ್ಷದೊಳಗೆ 1,700+ ರನ್ಗಳ ದಾಖಲೆಯನ್ನು ನಿರ್ಮಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದನ್ನು ಓದಿ : ಪಕ್ಕದ ಮನೆಯ ಯುವಕನ ವಿರುದ್ಧ ಅತ್ಯಾಚಾರ ಆರೋಪ; ಯುವತಿ ಆತ್ಮಹತ್ಯೆಗೆ ಯತ್ನ

ವಿಶ್ವದ 4ನೇ ಬ್ಯಾಟರ್
ಅಷ್ಟೇ ಅಲ್ಲದೆ ಈ ವರ್ಷ ಕಲೆಹಾಕಿರುವ 1703 ರನ್ಗಳೊಂದಿಗೆ Smriti Mandhana ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅತೀ ಕಡಿಮೆ ಇನಿಂಗ್ಸ್ಗಳ (281) ಮೂಲಕ 10 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

ಇದನ್ನು ನೋಡಿ : ‘ದಳಪತಿ’ ವಿಜಯ್ ಕೊನೇ ಸಿನಿಮಾದ ಆಡಿಯೋ ಲಾಂಚ್ನ ಹೇಗಿತ್ತು?




