Kalburagi ಪಕ್ಕದ ಮನೆಯವನು ಎಸಗಿದ ಪೈಶಾಚಿಕ ಕೃತ್ಯಕ್ಕೆ ಯುವತಿ (Young Women) ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಯುವತಿಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Kalburagi: ಕಲಬುರಗಿ ನಗರದ ಭಾರತಿನಗರ ತಾಂಡಾದಲ್ಲಿ ಪಕ್ಕದ ಮನೆಯ ಯುವತಿಯ (Young Women) ಮೇಲೆ ಯುವಕನೋರ್ವ ಅತ್ಯಾಚಾರ (Rape) ಎಸಗಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ವಿನೋದ್ ರಾಠೋಡ್ ಎಂದು ಗುರುತಿಸಲಾಗಿದೆ.
ಪಕ್ಕದ ಮನೆಯ ಯುವಕನ ವಿರುದ್ಧ ಅತ್ಯಾಚಾರ ಆರೋಪ
ಸಂತ್ರಸ್ತೆ ಯುವತಿ ಹಾಗೂ ಯುವಕ ವಿನೋದ್ ರಾಠೋಡ್ ಅಕ್ಕ ಪಕ್ಕದ ಮನೆಯವರಾಗಿದ್ದು, ಪಕ್ಕದ ಮನೆಯವನು ಎಂದು ಯುವತಿ ಸಲುಗೆಯಿಂದ ಮಾತಾಡಿಸಿದ್ದನ್ನೇ ಮಿಸ್ ಯೂಸ್ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ.
ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಆರೋಪ
ಇದನ್ನೇ ದುರುಪಯೋಗ ಮಾಡಿಕೊಂಡು ವಿನೋದ್ ಎರಡು ದಿನಗಳ ಹಿಂದೆ ಆಕೆಯನ್ನು ಉಪಾಯವಾಗಿ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಯುವತಿಗೆ ಮತ್ತು ಬರೋ ಔಷಧಿ ನೀಡಿ ಅತ್ಯಾಚಾರ (Rape)ವೆಸಗಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.
ಇದನ್ನೂ ಓದಿ : ಪಿಯು ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ಸ್ನೇಹಿತನಿಂದ ಅತ್ಯಾಚಾರ ಆರೋಪ ..!!

ಯುವತಿ ಆತ್ಮಹತ್ಯೆಗೆ ಯತ್ನ
ಇನ್ನು ಘಟನೆ ಬಳಿಕ ಯುವತಿ ಮನೆಗೆ ಬಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಇದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಆಕೆಯನ್ನು ರಕ್ಷಿಸಿ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಯುವತಿಗೆ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಬಿಚ್ಚಿಟ್ಟಿದ್ದಾಳೆ.
ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಯುವತಿ ಕುಟುಂಬಸ್ಥರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ವಿನೋದ್ ವಿರುದ್ದ ಅತ್ಯಾಚಾರ ಸಂಬಂಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕ ವಿನೋದ್ ರಾಠೋಡ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
MUST WATCH : ZERO TRAFFIC ನಲ್ಲಿ ಶಿಶು ರವಾನೆ – ಆಂಬುಲೆನ್ಸ್ ಗೆ ನೆರವಾದ ಪೊಲೀಸರು




