Koppala : 10 ಗಂಟೆಯ ನವಜಾತ ಶಿಶು ಜೀವನ್ಮರಣ ಹೋರಾಟ – ಝೀರೋ ಟ್ರಾಫಿಕ್ನಲ್ಲಿ ಕಿಮ್ಸ್ ಆಸ್ಪತ್ರೆಗೆ ರವಾನೆ.

ಕೇವಲ 10 ಗಂಟೆಯಿಂದೆ ಜನಿಸಿದ ಮಗುವಿಗೆ ಕರಳು ಹೊರಗೆ ಬಂದಿದ್ದು, ಮಗು ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಹೀಗಾಗಿ ಮಗುವಿಗೆ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು.
ಮಗುವನ್ನು ಉಳಿಸಲು ಆಂಬುಲೆನ್ಸ್ ಚಾಲಕರು ಒತ್ತೆ ಇಟ್ಟಿದ್ದರು. ಹೀಗಾಗಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಗಂಡು ಶಿಶುವನ್ನು ಜೀವ ರಕ್ಷಣೆಗಾಗಿ ಕೊಪ್ಪಳದ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯ್ತು. ಇನ್ನು ಆಂಬುಲೆನ್ಸ್ ಚಾಲಕರಿಗೆ ಪೊಲೀಸ್ ಇಲಾಖೆ ಕೂಡ ಸಾಥ್ ನೀಡಿತ್ತು.
ಕಿಮ್ಸ್ ಆಸ್ಪತ್ರೆಗೆ ರವಾನೆ
Koppala ಜಿಲ್ಲೆಯ ಕುಕನೂರು ತಾಲೂಕಿನ ಗುತ್ತೂರು ಗ್ರಾಮದ ಮಲ್ಲಪ್ಪ-ವಿಜಯಲಕ್ಷ್ಮೀ ದಂಪತಿಗೆ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಹೆರಿಗೆ ವೇಳೆ ಶಿಶುವಿನ ಕರುಳುಗಳು ಹೊರಗಡೆ ಬಂದ ಹಿನ್ನೆಲೆ ತಕ್ಷಣವೇ ಹೆಚ್ಚಿನ ಚಿಕಿತ್ಸೆಯ ಅಗತ್ಯವಾಯಿತು.
ಹೀಗಾಗಿ ಕೊಪ್ಪಳದ ತಾಯಿ- ಮಕ್ಕಳ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಝಿರೋ ಟ್ರಾಫಿಕ್ನಲ್ಲಿ ಸುಮಾರು 110 ಕಿಲೋ ಮೀಟರ್ ದೂರದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯ್ತು.
ಇದನ್ನು ಓದಿ : ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್ ! ಬೆಲೆಯಲ್ಲಿ ಇಳಿಕೆ

ಝೀರೋ ಟ್ರಾಫಿಕ್ ವ್ಯವಸ್ಥೆ
ನವಜಾತ ಶಿಶುವಿನ ಆರೋಗ್ಯ ಗಂಭೀರವಾಗಿದ್ದರಿಂದ ಆದಷ್ಟು ಬೇಗ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಹೀಗಾಗಿ ಟೈಂ ವೇಸ್ಟ್ ಮಾಡದಂತೆ ಐದು ಆಂಬುಲೆನ್ಸ್ಗಳ ಸಹಾಯದಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಆಂಬುಲೆನ್ಸ್ ಸಿಬ್ಬಂದಿ ನಿರಂತರ ವೈದ್ಯಕೀಯ ನಿಗಾ ವಹಿಸಿಕೊಂಡು ಶಿಶುವನ್ನು ಹುಬ್ಬಳ್ಳಿಗೆ ರವಾನೆ ಮಾಡಿದ್ರು.
ಆಂಬುಲೆನ್ಸ್ಗೆ ನೆರವಾದ ಪೊಲೀಸರು
ಇನ್ನು ಮಗುವಿನ ಪರಿಸ್ಥಿತಿಯನ್ನು ಪೊಲೀಸ್ ಇಲಾಖೆಗೂ ಕೂಡ ತಿಳಿಸಲಾಗಿದ್ದು, ಪೊಲೀಸರು ಕೂಡ ಮಗುವಿನ ರಕ್ಷಣೆಗೆ ಕೈಜೋಡಿಸಿದ್ದರು.
ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಸುಗಮ ಸಂಚಾರ ಒದಗಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದು, ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ನಿಯಂತ್ರಿಸಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು.
ಮಗುವಿನ ಜೀವ ಉಳಿಸಲು ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯ್ತು.

ಇದನ್ನು ನೋಡಿ : ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ




