Bigg Boss ಸೀಸನ್ 12ರ ಅತ್ಯಂತ ಕುತೂಹಲ ಘಟ್ಟ ತಲುಪಿದೆ. ಈಗಾಗಲೇ ಸೂರಜ್ ಅವರು ಮನೆಯಿಂದ ಔಟ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗುತ್ತಿದ್ದು, ಇದೀಗ ಶೋ ಅತ್ಯಂತ ಕುತೂಹಲಕರ ಘಟ್ಟವನ್ನು ತಲುಪಿದೆ. ಈಗಾಗಲೇ ಸ್ಪರ್ಧಿ ಸೂರಜ್ ಸಿಂಗ್ BigG Boss ಮನೆಯಿಂದ ಹೊರಬಿದ್ದಿದ್ದು, ಈ ವಾರ Double Elimination ನಡೆಯುತ್ತಿರುವ ಕಾರಣ ಇನ್ನೊಬ್ಬ ಸ್ಪರ್ಧಿಯ ಎಲಿಮಿನೇಶನ್ ಕೂಡ ಖಚಿತವಾಗಿದೆ.
ಇದರ ನಡುವೆಯೇ Social Media ದಲ್ಲಿ ಹೊಸ ಸುದ್ದಿಯೊಂದು ಭಾರೀ Viral ಆಗುತ್ತಿದೆ. ಈ ವಾರವೇ ಒಬ್ಬ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದೆ ಎನ್ನುವ ಚರ್ಚೆ ಜೋರಾಗಿದೆ.
ಇದನ್ನು ಓದಿ : KSRTC ನೌಕರರಿಗೆ ಸಿದ್ದರಾಮಯ್ಯ ಸರ್ಕಾರ ಗುಡ್ನ್ಯೂಸ್..!
ಸ್ಪಂದನಾ ಸೋಮಣ್ಣ ಎಲಿಮಿನೇಟ್?
ಬಿಗ್ ಬಾಸ್ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಇಂದು ಸ್ಪಂದನಾ ಸೋಮಣ್ಣ ಅವರು ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ವಾರ Show Host ಕಿಚ್ಚ ಸುದೀಪ್ ಗೈರಿರುವ ಹಿನ್ನೆಲೆ, ಅತಿಥಿಗಳಾಗಿ ನಿರ್ದೇಶಕ ಪ್ರೇಮ್, ನಟಿಯರಾದ ರೀಷ್ಮಾ, ಸುಷ್ಮಾ ಹಾಗೂ ತಾಂಡವ್ ಶೋಗೆ ಆಗಮಿಸಿ, ಬಿಗ್ ಬಾಸ್ ನೀಡಿದ ಕೆಲ ವಿಶೇಷ ಟಾಸ್ಕ್ಗಳನ್ನು ಸ್ಪರ್ಧಿಗಳಿಂದ ನಿಭಾಯಿಸಿದ್ದಾರೆ.

ಫಿನಾಲೆ ಟಿಕೆಟ್ ಯಾರಿಗೆ?
ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ವಿಷಯ ಎಂದರೆ – ನೇರ ಫಿನಾಲೆ ಟಿಕೆಟ್ ಯಾರಿಗೆ ಸಿಗಲಿದೆ? ಎಂಬ ಪ್ರಶ್ನೆ. ಅಧಿಕೃತವಾಗಿ ಈ ಬಗ್ಗೆ ಇನ್ನೂ ಘೋಷಣೆ ಆಗದಿದ್ದರೂ, ವೀಕ್ಷಕರ ನಡುವೆ ಭಾರೀ ಚರ್ಚೆ ಶುರುವಾಗಿದೆ. ಇನ್ನು ಬಿಗ್ ಬಾಸ್ ಅಭಿಮಾನಿಗಳು ‘ಗಿಲ್ಲಿ’ ನಟರೇ ನೇರವಾಗಿ ಫಿನಾಲೆಗೆ ಹೋಗುವ ಸ್ಪರ್ಧಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಗಿಲ್ಲಿಯೇ ಈ ಸೀಸನ್ನ ವಿನ್ನರ್ ಎಂದು ಈಗಲೇ ಸಂಭ್ರಮಿಸುತ್ತಿದ್ದಾರೆ.

ಇದನ್ನು ನೋಡಿ : KN RAJANNA | ನಮ್ಮ ಕೆಲಸವನ್ನು ತಿರುಚಿ ಹೇಳುವುದು ಬಿಜೆಪಿ ಕಟ್ಟಕಡೆಯ ಕೆಲಸ ಆಗಿದೆ




