
HASSAN-
ಅರಸೀಕೆರೆ ನಗರ ಸಭೆ ಅಧ್ಯಕ್ಷ ಎಂ ಸಮಿಉಲ್ಲಾ ಹಾಗೂ ಸಂತೋಷ್ ರ ಆರೋಪ ಪ್ರತಿ ಆರೋಪಗಳಿಗೆ ಅಂತ್ಯ ಆಡಲೇಬೇಕೆಂದು ಮಾಜಿ ನಗರ ಸಭಾ ಅಧ್ಯಕ್ಷ ಸಿ.ಗಿರೀಶ್ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು.
ಕಾಂಗ್ರೆಸ್ ಮುಖಂಡರಾದ ಕಾಟಿಕೆರೆ ಉಮೇಶ್ ಅವರ ನಗರ ಸಭೆಯ ಕೆಲವು ಕಾಮಗಾರಿಗಳನ್ನು ನಾವೇ ನಿರ್ವಹಿಸಿದ್ದೇವೆಂದು ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆ ವಿಚಾರ ಸತ್ಯವಾಗಿದ್ದರೆ ಅರಸೀಕೆರೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯ ಸಾನಿಧ್ಯಕ್ಕೆ ಬಂದು ಪ್ರಮಾಣ ಮಾಡಲಿ. ನಾವು ನಮ್ಮ ಸ್ನೇಹಿತರು ಸಹ ನಾಳೆ ದೇವರ ಸಾನಿಧ್ಯದಲ್ಲಿ ನಾವು ಪ್ರಮಾಣ ಮಾಡುತ್ತೇವೆ ಎಂದು ನೇರವಾಗಿ ಸವಾಲು ಹಾಕಿದರು.
ಕಳೆದ 15 ದಿನಗಳಿಂದ ಕೆಲವೊಂದು ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ಸುದ್ದಿಯಾಗಿದೆ. ಎಲ್ಲ ವಿಚಾರಗಳು ಇಂದು ಕೊನೆಯಾಗಿವೆ. ನನ್ನ ಸ್ನೇಹಿತರು ಹಾಗು ಅರಸೀಕೆರೆ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಕೆಲವೊಂದು ಹೇಳಿಕೆಗಳಲ್ಲಿ ನೋವಾಗಿದ್ದರೆ ಕ್ಷಮಾಪಣೆ ಕೋರಿದ್ದಾರೆ. ಹಾಗಾಗಿ ಎಲ್ಲಾ ಗೊಂದಲಗಳಿಗೆ ಇಂದು ಕೊನೆಯಾಗಲಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಹರ್ಷವರ್ಧನ್ ರಾಜ್ ಮಾತನಾಡಿ, ನಗರಸಭೆ ಅಧ್ಯಕ್ಷ ಸಿ ಗಿರೀಶ್ ಒಂದು ಸಮುದಾಯದ ಸಮುದಾಯ ಭವನದ ಸಮಸ್ಯೆ ಬಗೆಹರಿಸಿ, ತಮ್ಮ ಅಧ್ಯಕ್ಷ ಸ್ಥಾನವನ್ನೇ ಕಳೆದುಕೊಂಡಿದ್ದರು. ಅವರ ಕಾರ್ಯವನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎನ್ ಡಿಎ ಪಕ್ಷದ ಮುಖಂಡ ರಮೇಶ ನಾಯ್ಡು, ಮಾಜಿ ನಗರಸಭೆ ಸದಸ್ಯರಾದ ಹರ್ಷವರ್ಧನ್, ಜೆಡಿಎಸ್ ಮುಖಂಡರಾದ ಮಾರುತಿನಗರ ರಮೇಶ್. ಸವಿತಾ ಸಮಾಜದ ಅಧ್ಯಕ್ಷರಾದ ಕುಮಾರ್ , ಸುಮಿತ್. ಹಾಜರಿದ್ರು.




