
HASSAN:
ಬೇಲೂರಿನ ನಾಗಮಂಗಲ ಗಲಭೆ ಆಯ್ತು, ಮದ್ದೂರಿನ ಕಲ್ಲು ತೂರಾಟವಾಯ್ತು. ಈಗ ಹಾಸನದಲ್ಲಿ ಗಣೇಶನಿಗೆ ಚಪ್ಪಲಿ ಹಾಕಿ ಮಹಿಳೆಯೊಬ್ಬರು ವಿಕೃತಿ ಮೆರೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದ್ದು, ಜನರ ಆಕ್ರೋಶ ಹೊರಹಾಕುತ್ತಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪುರಸಭೆಯ ಆವರಣದಲ್ಲಿರುವ ಗಣಪತಿ ಮೂರ್ತಿಗೆ ಚಪ್ಪಲಿ ಹಾಕುವ ಮೂಲಕ ಮಹಿಳೆಯ ಒಬ್ಬರು ವಿಕೃತಿ ಮೆರೆದಿದ್ದಾರೆ. ಪ್ರತಿನಿತ್ಯ ಪೂಜೆ ನಡೆಯುವ ಗಣೇಶ ಮೂರ್ತಿಗೆ ಚಪ್ಪಲಿ ಹಾಕಿ ಅಪಮಾನ ಮಾಡಿದ್ದಾರೆ. ಬೆಳಿಗ್ಗೆ ಭಕ್ತಾಧಿಗಳು ವಾಯುವಿಹಾರಕ್ಕೆ ಹೋಗುವವರು, ವ್ಯಾಪಾರ ಆರಂಭಿಸುವ ವ್ಯಾಪಾರಿಗಳು ಶ್ರೀ ವಿದ್ಯಾಗಣಪತಿಗೆ ಕೈಮುಗಿಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಕಿಡಿಗೇಡಿಯ ಕೃತ್ಯಕ್ಕೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಹಾಸನದ ಬೇಲೂರಿನ ಗಣಪತಿ ವಿಗ್ರಹಕ್ಕೆ ಚಪ್ಪಲಿಯನ್ನಿಟ್ಟು, ಅಪಮಾನ ಮಾಡಿರುವ ಮಹಿಳೆಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಆರೋಪಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಇನ್ನು ಕಲ್ಲಿನ ವಿಗ್ರಹಕ್ಕೆ ಲಕ್ಷ್ಮೀ ಎಂಬ ಮಹಿಳೆ ತಾನು ಧರಿಸುವ ಚಪ್ಪಲಿಯನ್ನು ಹಾಕಿದ್ದಾಳೆ. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸರ ಕಾವಲು ಹಾಕಿದ್ದಾರೆ.
ಯಾವುದೇ ಜಾತಿ ಮತ ಭೇದವಿಲ್ಲದೆ ಪ್ರತಿನಿತ್ಯ ಸಾವಿರಾರು ಜನರು ಬಂದು, ವರಸಿದ್ದಿ ವಿನಾಯಕನ ಬಳಿ ತಮ್ಮ ಬೇಡಿಕೆಗಳ ಮೂಲಕ ಪ್ರಸಾದ ಕೇಳುವಂತಹ ವಾಡಿಕೆ ಇಂದಿಗೂ ಇದೆ. ಅಲ್ಲದೆ ನೂರಾರು ಶುಭ ಕಾರ್ಯಗಳನ್ನು ಈ ವರಸಿದ್ದಿ ವಿನಾಯಕನ ಮುಂಭಾಗದಲ್ಲಿ ಮಾಡಿರುವ ಹಲವು ನಿರ್ದೇಶನಗಳು ಇವೆ. ಇಂತಹ ಗಣೇಶ ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ ಮಹಿಳೆಯ ವಿರುದ್ಧ ಎಲ್ಲೆಡೆ ಆಕ್ರೋಶ ಕೇಳಿಬಂದಿದೆ.




