ಈ ವರ್ಷವೂ Radhika Pandit ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನ ಆಚರಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ ಪ್ರತಿವರ್ಷದಂತೆ ಈ ವರ್ಷವೂ ಮನೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಅವರು ತಮ್ಮ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅದನ್ನು ಲೈಟ್ಗಳು, ಬೆಲ್ಗಳು ಮತ್ತು ಅಲಂಕಾರಗಳಿಂದ ಸಿಂಗರಿಸಿದ್ದಾರೆ. ಹಬ್ಬದ ಸಂಭ್ರಮವನ್ನು ಕೇಕ್ ಜೊತೆಗೆ ಮನೆಗೆ ತುಂಬಿಕೊಂಡಿದ್ದಾರೆ.
ಇದನ್ನು ಓದಿ : ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ
ಕ್ರಿಸ್ಮಸ್ ಹಬ್ಬದ ಸಂಭ್ರಮ
Radhika Pandit ತಮ್ಮ Instagram ಖಾತೆಯಲ್ಲಿ ಟ್ರೀ ಸಿಂಗರಿಸಿರುವ ಫೋಟೋಗಳನ್ನು ಹಂಚಿಕೊಂಡು, ತಮ್ಮ ಪತಿ ಯಶ್ಗಾಗಿ ಕಾಯುತ್ತಿದ್ದರಾಗಿ ತಿಳಿಸಿದರು. ಅವರ ಮಕ್ಕಳು ಐರಾ ಮತ್ತು ಯಥರ್ವ್ ಟ್ವಿನ್ನಿಂಗ್ ಡ್ರೆಸ್ನಲ್ಲಿ ಕಾಣಿಸಿಕೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಡಾಡಾ ಕ್ಲಾಸ್ಗಾಗಿ ಕಾಯ್ತಿರೋ ರಾಧಿಕಾ
ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿ ಸಿಂಗರಿಸಿ ಸಾಂತಾಕ್ಲಾಸ್ ಬರೋದನ್ನೇ ಕಾಯೋದು ವಾಡಿಕೆ. ಅದೇ ರೀತಿ ರಾಧಿಕಾ ತಮ್ಮ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು, ಡಾಡಾಕ್ಲಾಸ್ಗಾಗಿ ಕಾಯ್ತಿರೋದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ಇಲ್ಲಿ ಡಾಡಾಕ್ಲಾಸ್ ಅಂದ್ರೆ ಯಶ್. ಟಾಕ್ಸಿಕ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಿದ್ದು, ಮನೆಯಲ್ಲಿ ಕುಟುಂಬ ಸಮೇತ ಕ್ರಿಸ್ಮಸ್ ಹಬ್ಬಕ್ಕಾಗಿ ಕಾಯ್ತಿರೋದಾಗಿ ತಿಳಿಸಿದ್ದಾರೆ.
ಇದನ್ನು ನೋಡಿ : ಬಸ್ ಅಪಘಾತ: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ಕಂದಮ್ಮ ಅಗ್ನಿಗೆ ಆಹುತಿ




