Dina Bhavishya : 2025 ಡಿಸೆಂಬರ್ 26ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishya :
ಮೇಷ ರಾಶಿ
ಇಂದು ಮೇಷ ರಾಶಿಯವರು ಅನಾವಶ್ಯಕವಾಗಿ ಇತರರ ವ್ಯವಹಾರಗಳಲ್ಲಿ ಕೈ ಹಾಕುವುದರಿಂದ ಧನ ಹಾಗೂ ಮಾನ ಹಾನಿಯಾಗುವ ಸಾಧ್ಯತೆ ಇದೆ. ಕೆಲಸದ ಒತ್ತಡಕ್ಕೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.
ಧೈರ್ಯದಿಂದ ನಿಮ್ಮ ಗುರಿಯತ್ತ ಸಾಗಿದರೆ, ಮೊದಲಿಗೆ ವಿರೋಧಿಸಿದವರೇ ನಂತರ ನಿಮ್ಮನ್ನು ಪ್ರಶಂಸಿಸುವರು. ಬದಲಾವಣೆಗೆ ಹೊಂದಿಕೊಳ್ಳುವುದು ಒಳಿತು. ತಲೆಸುತ್ತು ಅಥವಾ ನರಸಂಬಂಧಿ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.
ವೃಷಭ ರಾಶಿ
ಇಂದು ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಗಮನ ಅಗತ್ಯ. ಮನಸ್ಸಿನ ಗೊಂದಲಗಳು ದೂರವಾಗಲಿವೆ ಮತ್ತು ಹಣದ ಹರಿವು ಸಮರ್ಪಕವಾಗಿರುತ್ತದೆ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಆತ್ಮೀಯರ ಆಗಮನದಿಂದ ಸಂತೋಷವಾಗಲಿದೆ.
ಸ್ನೇಹಿತರೊಂದಿಗೆ ವ್ಯವಹಾರದಲ್ಲಿ ಮಿತಿಯಿರಲಿ, ಅತಿ ಸಲುಗೆಯಿಂದ ಆರ್ಥಿಕ ನಷ್ಟ ಸಂಭವಿಸಬಹುದು. ಕುಟುಂಬ ಜೀವನದಲ್ಲಿ ಸಂತಸವಿದ್ದು, ಸೋದರರಿಗೆ ಸ್ವಲ್ಪ ಕಷ್ಟ ಎದುರಾಗುವ ಸಾಧ್ಯತೆ ಇದೆ. ಮಿತಿ ಮೀರಿ ಖರ್ಚು ಮಾಡದಿರಿ.
ಮಿಥುನ ರಾಶಿ
ಇಂದು ಇತರರ ಮಾತು ನಂಬಿ ಕೊಟ್ಟ ಹಣ ಸಮಯಕ್ಕೆ ಮರಳದೇ ಹೋಗುವ ಸಾಧ್ಯತೆ ಇದೆ. ಮಕ್ಕಳು ತಮ್ಮ ಭವಿಷ್ಯದ ಆದಾಯ ಮಾರ್ಗವನ್ನು ಬೇಗ ಕಂಡುಕೊಳ್ಳುವುದು ಉತ್ತಮ. ಕುಟುಂಬದ ಹಿರಿಯರು ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ತೋರಿಸಿ, ಯಾತ್ರೆಗೆ ಹೊರಡುವ ಸಾಧ್ಯತೆ ಇದೆ.
ಮಾತಿನಲ್ಲಿ ಸೌಜನ್ಯ ಇರಲಿ, ಸ್ತ್ರೀ ಸಂಬಂಧಿ ವ್ಯವಹಾರ ಮತ್ತು ವ್ಯಾಜ್ಯಗಳಿಂದ ದೂರವಿರುವುದು ಒಳಿತು. ಆರೋಗ್ಯದಲ್ಲಿ ಏರುಪೇರಿನಿಂದ ನಿರುತ್ಸಾಹ ಉಂಟಾಗಬಹುದು; ಕುಲದೇವತೆಯನ್ನು ಪ್ರಾರ್ಥಿಸುವುದು ಶುಭ.
ಕಟಕ ರಾಶಿ
ಇಂದು ದಂಪತಿಗಳ ನಡುವಿನ ವಿರಸ ಸರಸವಾಗಲಿದೆ. ಭಿನ್ನಾಭಿಪ್ರಾಯಕ್ಕೆ ಕಾರಣರಾದವರು ತಾವಾಗಿಯೇ ಕ್ಷಮೆ ಕೇಳುವರು. ಹೊಸ ಯೋಜನೆಗಳಿಗೆ ಅನುಭವಿಗಳ ಸಲಹೆ ಪಡೆಯಿರಿ. ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯಲಿವೆ.
ಸ್ನೇಹಿತರೊಂದಿಗೆ ಹಳೆಯ ವೈಮನಸ್ಸನ್ನು ಕೆದಕದೆ, ಬಂಧುಗಳ ಸಹಕಾರವನ್ನು ಪಡೆಯಿರಿ. ಮನೆಯ ಆಸ್ತಿ ವಿಚಾರವನ್ನು ಮುಂದೂಡಬೇಡಿ. ವಿದೇಶದಲ್ಲಿರುವ ಸೋದರರಿಂದ ಆರ್ಥಿಕ ನೆರವು ಸಿಗಬಹುದು. ಸಾರ್ವಜನಿಕ ಕ್ಷೇತ್ರದವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸದೆ ನಿಷ್ಠೆಯಿಂದ ಕಾರ್ಯನಿರ್ವಹಿಸಿ.
ಸಿಂಹ ರಾಶಿ
ಇಂದು ಆತುರದ ನಿರ್ಧಾರಗಳು ತಪ್ಪು ದಾರಿಗೆ ಕೊಂಡೊಯ್ಯುವ ಸಾಧ್ಯತೆ ಇದೆ ಮತ್ತು ನಷ್ಟಕ್ಕೆ ಕಾರಣವಾಗಬಹುದು. ಬಂಧುಗಳಿಂದ ವಿರೋಧ ಎದುರಾಗುವ ಕಾರಣ ತಾಳ್ಮೆಯಿಂದ ವರ್ತಿಸುವುದು ಒಳಿತು. ಸರ್ಕಾರಿ ಕೆಲಸಗಳು ರಾಜಕೀಯ ಮುಖಂಡರ ನೆರವಿನಿಂದ ಸಾಗಬಹುದು.
ದೂರ ಪ್ರಯಾಣ ತಪ್ಪಿಸಿ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅನ್ಯ ವಿಷಯಗಳಲ್ಲಿ ತಲೆ ಹಾಕದೆ ಕುಟುಂಬದಲ್ಲಿ ಶಾಂತಿ ಕಾಪಾಡಿ. ಹಿರಿಯರ ಸಲಹೆ ಪಡೆದು ಚಿಕ್ಕ ವಿಷಯಗಳನ್ನು ದೊಡ್ಡದಾಗಿಸದೆ, ಕುಲದೇವತಾ ದರ್ಶನ ಮಾಡುವುದು ಶುಭ.
Dina Bhavishya :
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದ್ದು, ಅದರ ಕಾರಣವನ್ನು ಸ್ವತಃ ಅರಿತುಕೊಂಡರೆ ಪರಿಹಾರ ಸಿಗಲಿದೆ. ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿರಿ. ಹೊಸ ಅವಕಾಶಗಳು ದೊರೆಯಲಿದ್ದು ಸೂಕ್ತವಾದುದನ್ನು ಆಯ್ಕೆ ಮಾಡುವುದು ಮುಖ್ಯ. ಅತಿಯಾದ ಮಾತಿನಿಂದ ವೈರತ್ವ ಉಂಟಾಗಬಹುದು, ಇತರರ ಮಾತಿಗೆ ಹೆಚ್ಚು ಮಹತ್ವ ನೀಡಬೇಡಿ. ದಿನಚರಿಯಲ್ಲಿ ಉತ್ಸಾಹ ಹೆಚ್ಚಾಗಲಿದೆ;
ಆರಂಭಿಸಿದ ಕೆಲಸಗಳನ್ನು ಅರ್ಧಕ್ಕೆ ಬಿಡಬೇಡಿ. ಸಂಶೋಧನಾ ಕ್ಷೇತ್ರದಲ್ಲಿ ಹೊಸ ಫಲಿತಾಂಶಗಳು ಸಿಗಬಹುದು. ಉದ್ಯಮಿಗಳಿಗೆ ಸಾಲಗಾರರಿಂದ ಒತ್ತಡ ಎದುರಾಗುವ ಸಾಧ್ಯತೆ ಇರುವುದರಿಂದ ಅವಶ್ಯಕ ವಸ್ತುಗಳನ್ನಷ್ಟೇ ಖರೀದಿಸಿ.
ತುಲಾ ರಾಶಿ
ಇಂದು ಮನೆಯಲ್ಲೊಬ್ಬರ ಸಣ್ಣ ಮಾತಿನಿಂದ ಕಲಹ ಉಂಟಾಗುವ ಸಾಧ್ಯತೆ ಇದ್ದರೂ, ಹಿರಿಯರ ಮಧ್ಯಸ್ಥಿಕೆಯಿಂದ ಶಾಂತಿ ನೆಲೆಸಲಿದೆ. ಪ್ರೇಮಿಗಳು ಸಂಗಾತಿಯೊಂದಿಗೆ ವಿಹಾರಕ್ಕೆ ಯೋಜನೆ ರೂಪಿಸುವರು. ಬಾಕಿ ಹಣ ಸಕಾಲದಲ್ಲಿ ವಸೂಲಾಗಲಿದೆ ಮತ್ತು ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮನಸ್ಸು ಆಧ್ಯಾತ್ಮದ ಕಡೆಗೆ ತಿರುಗುತ್ತದೆ.
ಸೋದರನೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಿರಿ. ಸಾಲ ತೀರುವುದು ನೆಮ್ಮದಿಯನ್ನು ತರುತ್ತದೆ. ತಾಯಿಯ ಆರೋಗ್ಯದ ಕಡೆ ಗಮನ ನೀಡಿ; ವಿವಾಹ ಮಾತುಕತೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ.
ವೃಶ್ಚಿಕ ರಾಶಿ
ಇಂದು ಅಮೂಲ್ಯ ವಸ್ತುಗಳ ಬಗ್ಗೆ ಅತಿಯಾಗಿ ಚಿಂತಿಸಬೇಕಾಗಿಲ್ಲ. ಆದಾಯ ಹೆಚ್ಚಾದರೂ ಖರ್ಚುಗಳು ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ ಕಾಣಿಸಬಹುದು. ಕೆಲಸಗಾರರಿಂದ ನಿಷ್ಠೆ ಹಾಗೂ ಪ್ರಾಮಾಣಿಕತೆ ನಿರೀಕ್ಷಿಸಬಹುದು ಮತ್ತು ತಪ್ಪಿದ ಲೆಕ್ಕಾಚಾರ ಸರಿಯಾಗಲಿದೆ.
ಹಿರಿಯರ ಆರೈಕೆ ಕಡೆ ಗಮನ ನೀಡಿ, ವೈದ್ಯರ ಸಲಹೆ ಅನುಸರಿಸಿ. ಸಹೋದ್ಯೋಗಿಗಳ ಹೊಗಳಿಕೆಗೆ ಅತಿಯಾಗಿ ಮರುಳಾಗದೆ ಎಚ್ಚರದಿಂದ ವರ್ತಿಸುವುದು ಒಳಿತು.
ಧನು ರಾಶಿ
ಇಂದು ಧನು ರಾಶಿಯವರಿಗೆ ಆಸ್ತಿ ವ್ಯವಹಾರದಲ್ಲಿ ವಿಶೇಷ ಲಾಭ ದೊರೆಯಲಿದೆ. ಕುಟುಂಬದಲ್ಲಿ ಸಂಭವಿಸುವ ಅನಿರೀಕ್ಷಿತ ಬೆಳವಣಿಗೆ ಶುಭಕರವಾಗಿರುತ್ತದೆ. ಹಿರಿಯರ ಮಾರ್ಗದರ್ಶನ ಹಾಗೂ ಗುರುದೇವತಾ ದರ್ಶನದಿಂದ ಅನುಕೂಲ ಸಿಗಲಿದೆ.
ವೈಯಕ್ತಿಕ ಜೀವನದಲ್ಲಿ ಮುನ್ನಡೆ ಕಾಣುವಿರಿ. ಮಗಳಿಗೆ ಉತ್ತಮ ಸಂಬಂಧ ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಪಾಲುದಾರರ ಸಲಹೆ ಕೇಳುವುದು ಒಳಿತು.
ಮಕರ ರಾಶಿ
ಇಂದು ಶ್ರದ್ಧೆ ಮತ್ತು ಶ್ರಮದಿಂದ ಯಶಸ್ಸಿನ ದಾರಿ ಕಾಣುವಿರಿ. ಬಂಧುಗಳು ಹಾಗೂ ಸ್ನೇಹಿತರಿಂದ ಹಳೆ ಸಾಲ ವಸೂಲಾಗಲಿದೆ. ಸ್ನೇಹಿತರ ಮಾತಿನಿಂದ ಉಂಟಾದ ನೋವನ್ನು ಮರೆತು ವೈಮನಸ್ಸನ್ನು ದೂರವಿಡಿ. ವಿದ್ಯಾರ್ಥಿಗಳಿಗೆ ಅಧ್ಯಯನದ ಗೊಂದಲ ನಿವಾರಣೆಯಾಗುತ್ತದೆ.
ಹಿರಿಯರನ್ನು ಗೌರವಿಸಿ, ಮನೆಯ ಕೆಲಸಗಳಿಗೆ ಪೂರ್ವಸಿದ್ಧತೆ ಮಾಡಿ. ನಿರುದ್ಯೋಗಿಗಳಿಗೆ ಸಾಧಾರಣ ವೇತನದ ಉದ್ಯೋಗ ಸಿಗಬಹುದು. ಖಾಸಗಿ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಿ; ಶಕ್ತಿ ಮೀರಿದ ಕೆಲಸಗಳನ್ನು ತಪ್ಪಿಸಿ.
ಕುಂಭ ರಾಶಿ
ಇಂದು ಕುಲದೇವತಾರಾಧನೆಯಿಂದ ಇಷ್ಟಾರ್ಥ ಸಿದ್ಧಿಯಾಗುವ ಸಾಧ್ಯತೆ ಇದೆ. ಅನಿವಾರ್ಯ ದೂರ ಪ್ರಯಾಣ ಲಾಭ ತರುತ್ತದೆ. ಬಂಧುಗಳು ಸಹಾಯಕ್ಕಾಗಿ ಸಂಪರ್ಕಿಸಬಹುದು. ಹಿರಿಯರ ಮಾರ್ಗದರ್ಶನದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಿರೀಕ್ಷೆಯಂತೆ ಆದಾಯ ಸಿಗಲಿದೆ.
ಬಂಗಾರದ ವ್ಯಾಪಾರಿಗಳಿಗೆ ಉತ್ತಮ ವಹಿವಾಟು, ನ್ಯಾಯಾಲಯದ ವಿಚಾರಗಳು ನಿಮ್ಮ ಪರವಾಗಿರಬಹುದು. ಭೂ ಮಾರಾಟದಲ್ಲಿ ಹೆಚ್ಚು ಲಾಭ ದೊರೆತು, ಇಷ್ಟಮಿತ್ರರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ
ಮೀನ ರಾಶಿ
ಇಂದು ಅನಿರೀಕ್ಷಿತ ಆದಾಯದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಯೋಜನೆಗಳಿಗೆ ಅಗತ್ಯ ಬಂಡವಾಳ ದೊರೆಯಲಿದೆ. ಆದಾಯವನ್ನು ಅಪವ್ಯಯ ಮಾಡದೆ ಜಾಗರೂಕವಾಗಿರಿ.
ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವಿರಿ. ಕಚೇರಿಯಲ್ಲಿ ಗೌರವ ಹೆಚ್ಚಲಿದೆ; ಅನವಶ್ಯಕ ಆತಂಕವನ್ನು ದೂರವಿಡಿ.




