ಇಂದು ನಾಡಿನೆಲ್ಲೆಡೆ Christmas ಹಬ್ಬದ ಸಂಭ್ರಮಾಚರಣೆ.

ನಾಡಿನಾದ್ಯಂತ ಕ್ರೈಸ್ತ ಸಮುದಾಯವು ಕ್ರಿಸ್ ಮಸ್ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸುತ್ತಿದ್ದು, ತುಮಕೂರಲ್ಲೂ ಸಹ ಕಳೆಗಟ್ಟಿದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಗರದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದ್ದು, ಬೆಳಗ್ಗಿನಿಂದಲೇ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದನ್ನು ಓದಿ : ವರ್ಲ್ಡ್ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ

ನಗರದ ಚರ್ಚ್ ಸರ್ಕಲ್ನಲ್ಲಿರುವ C.S.I ಚರ್ಚ್, ಲೂರ್ದು ಮಾತೆ ಚರ್ಚ್ ಸೇರಿದಂತೆ ವಿವಿಧ ಚರ್ಚುಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ, ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದರು. ಹೊಸ ಉಡುಪು ಧರಿಸಿ ಕಂಗೊಳಿಸಿದ್ರು. ಕ್ರಿಸ್ಮಸ್ ಹಿನ್ನೆಲೆ ಎಲ್ಲಾ ಪ್ರಮುಖ ಚರ್ಚುಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಚರ್ಚುಗಳು ಕಂಗೊಳಿಸಿದವು. ಚರ್ಚು ಆವರಣಗಳಲ್ಲಿ ಕ್ರಿಸ್ಮಸ್ ಕ್ಯಾರೋಲ್ ಗೀತೆಗಳು ಮೊಳಗಿದರೆ, ಎಲ್ಲೆಡೆ ಹಬ್ಬದ ಸಂಭ್ರಮಾಚರಣೆ ಕಂಡುಬಂತು.

ಪ್ರಾರ್ಥನೆಯ ನಂತರ ಪರಸ್ಪರ Christmas ಹಬ್ಬದ ಶುಭಾಶಯಗಳನ್ನು ಕೋರಿಕೊಂಡ ಕ್ರಿಶ್ಚಿಯನ್ಸ್, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು. ತುಮಕೂರಿನಲ್ಲಿ ಕ್ರಿಸ್ಮಸ್ ಹಬ್ಬವು ಭಕ್ತಿ ಮತ್ತು ಸಾಮಾಜಿಕ ಸೌಹಾರ್ದತೆ ಯೊಂದಿಗೆ ಅರ್ಥಪೂರ್ಣವಾಗಿ ಆಚರಣೆಯಾಯಿತು.

ಇದನ್ನು ನೋಡಿ : ನ್ಯೂಜಿಲೆಂಡ್ ವರ.. ಕರ್ನಾಟಕದ ವಧು; ಸಾಗರದಾಚೆಗಿನ ವಿವಾಹಕ್ಕೆ ಸಾಕ್ಷಿಯಾದ ಬೆಣ್ಣೆನಗರಿ




