ರಣವೀರ್ ಸಿಂಗ್ ನಟನೆಯ Dhurandar 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಈ ಚಿತ್ರದ ವಿಶ್ವ ಮಟ್ಟದ ಒಟ್ಟು ಕಲೆಕ್ಷನ್ ಸುಮಾರು 935 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಈ ಮೂಲಕ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಚಾಪ್ಟರ್ 1’ ಚಿತ್ರದ ದಾಖಲೆ ಮುರಿದಿದೆ.
ಕಾಂತಾರ 1 ದಾಖಲೆ ಉಡೀಸ್
850 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಕಾಂತಾರ ಚಾಪ್ಟರ್ 1 ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾ ಆಗಿತ್ತು. ಆದರೆ ಇದೀಗ ಧುರಂಧರ್ 900 ಕೋಟಿ ರೂಪಾಯಿ ಗಡಿ ದಾಟಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಇದನ್ನು ಓದಿ : ತುಮಕೂರಿನ ವಿವಿಧ ಚರ್ಚ್ ಗಳಲ್ಲಿ ಅದ್ದೂರಿ ಕ್ರಿಸ್ ಮಸ್ ಆಚರಣೆ

600 ಕೋಟಿ ಕಲೆಕ್ಷನ್
ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮಾತ್ರವೇ ಧುರಂಧರ್ ಸಿನಿಮಾ 600 ಕೋಟಿ ರೂಪಾಯಿ ಗಳಿಸಿದೆ. ಬಿಡುಗಡೆಗೊಂಡ 20ನೇ ದಿನವೂ ಚಿತ್ರ ಭಾರತದಲ್ಲಿ 17 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ತನ್ನ ಬಲವನ್ನು ಪ್ರದರ್ಶಿಸಿದೆ. ಈ ವೀಕೆಂಡ್ ಒಳಗೆ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ರೂಪಾಯಿ ಕ್ಲಬ್ ಸೇರಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಮೂಲಕ 2025ರ ಮೊದಲ ಸಾವಿರ ಕೋಟಿ ರೂಪಾಯಿ ಕ್ಲಬ್ ಸಿನಿಮಾ ಆಗುವ ನಿರೀಕ್ಷೆಯಿದೆ.
ಕೆಲ ದೇಶಗಳಲ್ಲಿ ಬ್ಯಾನ್
ಇನ್ನು Dhurandar ಸಿನಿಮಾವನ್ನು ಕೆಲ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂಬ ಮಾಹಿತಿ ಇದ್ದರೂ, ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವಂತಿಲ್ಲ. ನೆಗೆಟಿವ್ ಟಾಕ್ ಇದ್ದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗುತ್ತಿದೆ.

ಇದನ್ನು ನೋಡಿ : CLINIC SEALED | ಒಂದೇ ಸುದ್ದಿಗೆ ಬಿಂದು ಕ್ಲಿನಿಕ್ ಸೀಲ್ – ಪ್ರಜಾಶಕ್ತಿ ಟಿವಿಯ BIG IMPACT




