ಪತಿಯೇ ಪತ್ನಿಯನ್ನು ಶೂಟ್ ಮಾಡಿ ಜೀವ ತೆಗೆದ ಘಟನೆ Bengaluru ನಗರದಲ್ಲಿ ನಡೆದಿದೆ.

Bengaluru ನಗರದ ಬಸವೇಶ್ವರನಗರ ವ್ಯಾಪ್ತಿಯಲ್ಲಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಭೀಕರ ಘಟನೆ ನಡೆದಿದೆ. ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಸಮೀಪ ಈ ಕೃತ್ಯ ನಡೆದಿದ್ದು, ನಗರವನ್ನು ಬೆಚ್ಚಿಬೀಳಿಸಿದೆ.
Bengaluru ನಗರದಲ್ಲಿ ಪತ್ನಿಗೆ ಗುಂಡಿಟ್ಟು ಜೀವ ತೆಗೆದ ಪತಿ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ಬಾಲ ಮುರುಗನ್ ಹಾಗೂ ಪತ್ನಿ ಭುವನೇಶ್ವರಿ ನಡುವೆ ವಿಚ್ಛೇದನ (ಡಿವೋರ್ಸ್) ಪ್ರಕರಣ ನಡೆಯುತ್ತಿತ್ತು. ನಿನ್ನೆ ಸಂಜೆ ಸುಮಾರು 6.30ರ ವೇಳೆಗೆ ಕೋರ್ಟ್ ವಿಚಾರಣೆ ಮುಗಿಸಿಕೊಂಡು ಭುವನೇಶ್ವರಿ ತೆರಳುತ್ತಿದ್ದಾಗ, ಪತಿ ಬಾಲ ಮುರುಗನ್ ಎದುರಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಬಾಲ ಮುರುಗನ್ ಪತ್ನಿಗೆ ಶೂಟ್ ಮಾಡಿದ್ದಾನೆ. ನಂತರ ಬಾಲಮುರುಗನ್ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನು ಓದಿ : ಸಿನಿಮೀಯ ರೀತಿಯಲ್ಲಿ ಕಾರು ಪಲ್ಟಿ, ಓರ್ವ ಸಾವು
ಪೊಲೀಸರಿಂದ ತನಿಖೆ
ತಮಿಳುನಾಡು ಮೂಲದ ದಂಪತಿ ಇವರಾಗಿದ್ದು ಬಾಲ ಮುರುಗನ್ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಇನ್ನು ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಾಲ್ಕು ಬಾರಿ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. 2 ಗುಂಡು ತಲೆಗೆ ಹಾಗೂ 2 ಗುಂಡು ಕೈಗೆ ತಗುಲಿದೆ, ಪಿಸ್ತೂಲ್ಗೆ ಲೈಸೆನ್ಸ್ ಇದ್ಯಾ, ಇಲ್ವಾ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : Minor Driving Case | ಅಪ್ರಾಪ್ತ ಬಾಲಕನಿಗೆ ಕಾರು ಕೊಟ್ಟ ಪೋಷಕರಿಗೆ SHOCKING FINE




