ಗುಬ್ಬಿಯಲ್ಲಿ ಶಾಸಕ S.R Srinivas ಎಚ್ಚರಿಕೆ.

ಮಾಧ್ಯಗಳ ಮುಂದೆ ನಿಂತು ವ್ಯಕ್ತಿಗತವಾಗಿ ತೇಜೋವದೆ ಮಾಡುತ್ತಾ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ಇಲ್ಲ ಸಲ್ಲದ ಹೇಳಿಕೆ ನೀಡುವವರಿಗೆ ದ್ವೇಷ ಭಾಷಣ ತಡೆ ಕಾಯ್ದೆಯಿಂದ ತೊಂದರೆ ಕಟ್ಟಿಟ್ಟ ಬುತ್ತಿ ಎಂದು KSRTC ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ (S.R Srinivas) ತಿಳಿಸಿದರು.
ಇದನ್ನು ಓದಿ : Dina Bhavishya|ದಿನ ಭವಿಷ್ಯ 23 ಡಿಸೆಂಬರ್ 2025
ಸರ್ಕಾರದ ಕ್ರಮವನ್ನು ಸಮರ್ಥನೆ
ಗುಬ್ಬಿ ಪಟ್ಟಣದ ಶಾಸಕರ ಕಾರ್ಯಲಯದಲ್ಲಿ ಮಾತನಾಡಿದ S.R Srinivas ಅವರು, ಸಮುದಾಯಗಳ ಬಗ್ಗೆ ಕೆಟ್ಟದಾಗಿ ವರ್ತಿಸುವ ಜೊತೆಗೆ ವ್ಯಕ್ತಿಗತವಾಗಿ ನಿಂದಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈ ಕಾಯ್ದೆ ಜಾರಿ ಮಾಡಲಾಗಿದೆ ಯಾವ ಪರಿಕಲ್ಪನೆಯಲ್ಲಿ ಈ ಕಾಯಿದೆ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗುತ್ತೆ ಎಂದು ವಿ. ಸೋಮಣ್ಣ ಹೇಳಿದ್ದರೋ ತಿಳಿದಿಲ್ಲ, ಯಾರಾದರೂ ನಾಲಿಗೆ ಹರಿಬಿಟ್ಟರೆ ಜೊತೆಗೆ ಒಂದು ಕೇಸ್ ದಾಖಲಾದ ಮೇಲೆ ಎಲ್ಲರಿಗೂ ಈ ಕಾಯ್ದೆ ಬಗ್ಗೆ ತಿಳಿಯುತ್ತೆ ಎಂದು ಎಚ್ಚರಿಕೆ ನೀಡುವ ಜೊತೆಗೆ ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡರು.
ಯಾವ ರೀತಿ ಕಡಿವಾಣ ಹಾಕುತ್ತೆ?
ಒಟ್ಟಿನಲ್ಲಿ ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಅಂಗೀಕಾರವಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾಯ್ದೆ ದ್ವೇಷ ಭಾಷಣ ಮಾಡುವವರಿಗೆ ಯಾವ ರೀತಿಯಾಗಿ ಕಡಿವಾಣ ಹಾಕುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನು ನೋಡಿ : ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ




