
ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಹೊಸ Farmers Helpline ಸೇವೆಯನ್ನು ಪ್ರಾರಂಭಿಸಿದೆ. ಹವಾಮಾನ, ಮಾರುಕಟ್ಟೆ ಬೆಲೆ, ಸರ್ಕಾರಿ ಯೋಜನೆಗಳು, ಬೆಳೆ ರಕ್ಷಣೆ, ನೀರಿನ ನಿರ್ವಹಣೆ, ರಸಗೊಬ್ಬರ ಬಳಕೆ ಮತ್ತು ಬಿತ್ತನೆ ಸಮಯದಂತಹ ಕೃಷಿ ಸಂಬಂಧಿತ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ರೈತರು 1800-180-1551 ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಈ ಸೇವೆ ರಾಜ್ಯದ ಯಾವುದೇ ಪ್ರದೇಶದಿಂದ, ಗ್ರಾಮೀಣ ಹಳ್ಳಿಗಳಿಂದಲೂ ವಾರದ ಏಳು ದಿನಗಳು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಉಚಿತವಾಗಿ ಲಭ್ಯವಿದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ತಿಳಿಸಿದಂತೆ, ಈ ಕಾಲ್ ಸೆಂಟರ್ಗಳಲ್ಲಿ ನಿರ್ಧಿಷ್ಟ ತಜ್ಞರು (Agricultural Teleconsultants) ರಾಜ್ಯ ಭಾಷೆಯಲ್ಲಿ ರೈತರಿಗೆ ಸಲಹೆ ನೀಡುತ್ತಾರೆ. ಹವಾಮಾನ ಮುನ್ಸೂಚನೆ, ಬೆಳೆ ಕಾಯಿಲೆಗಳು, ಕೀಟ ನಿಯಂತ್ರಣ, ಮಾರುಕಟ್ಟೆ ಬೆಲೆ ಮತ್ತು ತಂತ್ರಜ್ಞಾನ ಆಧಾರಿತ ಕೃಷಿ ವಿಧಾನಗಳ ಕುರಿತು ವೀಡಿಯೊ ಕಾನ್ಫರೆನ್ಸಿಂಗ್, ಫೋಟೋ ಹಂಚಿಕೆ ಸೇರಿದಂತೆ ಆಧುನಿಕ ತಾಂತ್ರಿಕ ಸಹಾಯ ಕೂಡ ಲಭ್ಯವಿದೆ.

ಈ ಉಚಿತ ಸೇವೆಯ ಮೂಲಕ ರೈತರು ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಪಡೆಯುತ್ತಾ, ಉತ್ತಮ ಕೃಷಿ ನಿರ್ಧಾರಗಳನ್ನು ಕೈಗೊಂಡು ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಹವಾಮಾನ ಬದಲಾವಣೆ ಅಥವಾ ಕೀಟದ ಹಾವಳಿ ಮುನ್ಸೂಚನೆ ಸಿಗುವ ಮೂಲಕ, ರೈತರು ಬೆಳೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಬಹುದು. ಇದು ದೇಶಾದ್ಯಾಂತ ಕೃಷಿ ಕ್ಷೇತ್ರದ ಡಿಜಿಟಲ್ ಪರಿವರ್ತನೆ ಮತ್ತು ರೈತರ ಜೀವನದಲ್ಲಿ ಮಹತ್ವದ ಬದಲಾವಣೆ ತರಲಿದೆ.




