ರಣವೀರ್ ಸಿಂಗ್ ನಟನೆಯ Dhurandhar 2ನೇ ಭಾನುವಾರ ಕೂಡ ಅದ್ಭುತ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ.

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಎರಡನೇ ವಾರಾಂತ್ಯದಲ್ಲಿಯೂ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಸಾಧನೆ ಮಾಡಿದೆ. ಈ ಚಿತ್ರ ಶೀಘ್ರದಲ್ಲೇ ‘KGF-2’ ದಾಖಲೆ ಮುರಿಯುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.
ವಾರಾಂತ್ಯದ ಕಲೆಕ್ಷನ್
- ಡಿಸೆಂಬರ್ 13 (ಶನಿವಾರ): 53 ಕೋಟಿ ರೂ.
- ಭಾನುವಾರ: 59 ಕೋಟಿ ರೂ.
- ವಾರಾಂತ್ಯ ಒಟ್ಟು: 112 ಕೋಟಿ ರೂ.
ಭಾರತದ ಒಟ್ಟು ಕಲೆಕ್ಷನ್: 350 ಕೋಟಿ ರೂಪಾಯಿ ದಾಟಿದೆ.
ಇದನ್ನು ಓದಿ : ಮತ್ತೆ ಹೆಚ್ಚಾಯ್ತು ಚಿನ್ನದ ದರ

ಬಾಕ್ಸ್ ಆಫೀಸ್ ಓಟ ಮುಂದುವರಿಯುತ್ತಿದೆ
- ಮೊದಲ ವಾರಾಂತ್ಯದಲ್ಲಿ: 103 ಕೋಟಿ ರೂ. (ಶುಕ್ರವಾರ 28 ಕೋಟಿ, ಶನಿವಾರ 32 ಕೋಟಿ, ಭಾನುವಾರ 43 ಕೋಟಿ)
- ಸೋಮವಾರ: 23.25 ಕೋಟಿ
- ಮಂಗಳವಾರ: 27 ಕೋಟಿ → ಒಟ್ಟು 150 ಕೋಟಿ ದಾಟಿದೆ
- ಬುಧವಾರ ಮತ್ತು ಗುರುವಾರ: ತಲಾ 27 ಕೋಟಿ → ಒಟ್ಟು 207.25 ಕೋಟಿ
ನೈಜ ಘಟನೆಗಳನ್ನು ಆಧರಿತ ಸಿನಿಮಾ
ಇನ್ನು Dhurandhar ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರೇಕ್ಷಕರನ್ನು ಸೆಳೆಯುವ ಸಂಭಾಷಣೆಗಳು, ತಂತ್ರ, ದೃಶ್ಯಗಳು ವಿಶೇಷ ಗಮನಸೆಳೆದಿವೆ. ರಣವೀರ್ ಸಿಂಗ್–ಸಾರಾ ಅರ್ಜುನ್ ಜೋಡಿ ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಿದೆ.

ಇದನ್ನು ನೋಡಿ : ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ




