ಮತ್ತೆ ಹೆಚ್ಚಳವಾದ ಚಿನ್ನದ ದರ : ಇಂದಿನ ರೇಟ್ ಚೆಕ್ ಮಾಡಿ.

Gold Rate ಇಂದು ಕೂಡ (ಡಿಸೆಂಬರ್ 15) ತನ್ನ ಮೇಲ್ಮುಖ ಓಟವನ್ನು ಮುಂದುವರಿಸಿದೆ. ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ.
ಬೆಂಗಳೂರಿನ ಚಿನ್ನದ ದರ
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 75 ರೂ. ಹೆಚ್ಚಳವಾಗಿದ್ದು, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 82 ರೂ. ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ 12,350 ರೂ. ಆಗಿದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 13,473 ರೂ. ಪಾವತಿಸಬೇಕಾಗಿದೆ.
ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 98,800 ರೂ., 10 ಗ್ರಾಂಗೆ 1,23,500 ರೂ. ಮತ್ತು 100 ಗ್ರಾಂಗೆ 12,35,000 ರೂ. ಇದೆ. ಇನ್ನು 24 ಕ್ಯಾರಟ್ನ 8 ಗ್ರಾಂ ಚಿನ್ನಕ್ಕೆ 1,07,784 ರೂ., 10 ಗ್ರಾಂಗೆ 1,34,730 ರೂ. ಹಾಗೂ 100 ಗ್ರಾಂಗೆ 13,47,300 ರೂ.ಗೆ ತಲುಪಿದೆ.
ಇದನ್ನು ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೀತಾ ಭಾರತಿ ಭಟ್
ಪ್ರಮುಖ ನಗರಗಳಲ್ಲಿ ಚಿನ್ನದ ದರ
ದೇಶದ ಪ್ರಮುಖ ನಗರಗಳಲ್ಲೂ ಚಿನ್ನದ ದರ ಏರಿಕೆಯಾಗಿದೆ. ಚೆನ್ನೈನಲ್ಲಿ ಇಂದು 22 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 12,460 ರೂ. ಇದ್ದರೆ, ಮುಂಬೈನಲ್ಲಿ 12,350 ರೂ., ದೆಹಲಿಯಲ್ಲಿ 12,365 ರೂ., ಕೋಲ್ಕತ್ತಾದಲ್ಲಿ 12,350 ರೂ. ಹಾಗೂ ಹೈದರಾಬಾದ್ನಲ್ಲಿ 12,350 ರೂ. ಇದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 12,460 ರೂ. | 13,593 ರೂ. |
| ಮುಂಬೈ | 12,350 ರೂ. | 13,473 ರೂ. |
| ದೆಹಲಿ | 12,365 ರೂ. | 13,488 ರೂ. |
| ಕೋಲ್ಕತ್ತಾ | 12,350 ರೂ. | 13,473 ರೂ. |
| ಹೈದರಾಬಾದ್ | 12,350 ರೂ. | 13,473 ರೂ. |
ಬೆಳ್ಳಿ ದರವೂ ಏರಿಕೆ
ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರದಲ್ಲಿಯೂ ಏರಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿಗೆ 200.90 ರೂ. ಇದ್ದು, 8 ಗ್ರಾಂಗೆ 1,607.20 ರೂ., 10 ಗ್ರಾಂಗೆ 2,009 ರೂ. ಹಾಗೂ 1 ಕೆಜಿ ಬೆಳ್ಳಿಗೆ 2,00,900 ರೂ. ಪಾವತಿಸಬೇಕಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳಲ್ಲಿ ಆಗುತ್ತಿರುವ ಬದಲಾವಣೆ, ಆಮದು ಸುಂಕಗಳು, ತೆರಿಗೆ ವ್ಯವಸ್ಥೆ ಹಾಗೂ ರೂಪಾಯಿ–ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ನೋಡಿ : ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?




