ದಾಂಪತ್ಯ ಬದುಕಿಗೆ ಕಾಲಿಟ್ಟ ʻಬ್ರಹ್ಮಗಂಟುʼ ಸೀರಿಯಲ್ ನಟಿ Geetha Bharathi Bhat ; ಇಲ್ಲಿವೆ ಮದುವೆಯ ಫೋಟೋಗಳು.

‘ಬ್ರಹ್ಮಗಂಟು’ ಧಾರಾವಾಹಿಯ ಮೂಲಕ ಮನೆಮಾತಾಗಿರುವ ಜನಪ್ರಿಯ ನಟಿ ಗೀತಾ ಭಾರತಿ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. Geetha Bharathi Bhat ಅವರ ವಿವಾಹವು ಬ್ರಹ್ಮಾವರದ ರಾಜರಾಮ್ ಭಟ್ ಅವರೊಂದಿಗೆ ನೆರವೇರಿದೆ.

ಬಂಧು–ಮಿತ್ರರ ಸಮ್ಮುಖದಲ್ಲಿ ಮದುವೆ
ಕುಟುಂಬದವರು ಹಾಗೂ ಆಪ್ತ ಬಂಧು–ಮಿತ್ರರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ಅತ್ಯಂತ ಅದ್ದೂರಿಯಾಗಿ ಹಾಗೂ ಸಂಪ್ರದಾಯಬದ್ಧವಾಗಿ ನೆರವೇರಿದೆ. ಇನ್ನು ಗೀತಾ ಭಾರತಿ ಭಟ್ ವಿವಾಹ ಸಮಾರಂಭದ ಸುಂದರ ಫೋಟೋಗಳು Social Media ಗಳಲ್ಲಿ Viral ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇದನ್ನು ಓದಿ : ಗಾಂಧಿನಗರದಲ್ಲಿ ಧೂಳ್ ಎಬ್ಬಿಸ್ತಾ ಇದೆ ಡೆವಿಲ್ ಮೂವಿ..!?

ಹಲವು ಸಿನಿಮಾಗಳಲ್ಲಿ ಅಭಿನಯ
ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲೂ ಅಭಿನಯಿಸಿರುವ ಗೀತಾ ಭಾರತಿ ಭಟ್, ಗಾಯಕಿಯಾಗಿಯೂ ಹೆಸರು ಮಾಡಿದ್ದಾರೆ. ಬ್ರಹ್ಮಾವರ ರಾಜರಾಮ್ ಭಟ್ – ಗೀತಾ ಭಾರತಿ ಭಟ್ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದುಬಂತು ಶುಭಾಶಯಗಳ ಮಹಾಪೂರ.

ಇದನ್ನು ನೋಡಿ : ಬಿಗ್ ಬಾಸ್ ಫಿನಾಲೆ ಯಾವಾಗ? ಕಿಚ್ಚ ಸುದೀಪ್ ಏನಂದ್ರು?




