Devil ಸಿನಿಮಾ 4ನೇ ದಿನದ ಕಲೆಕ್ಷನ್ ಎಷ್ಟು?

ಅಭಿಮಾನಿಗಳ ಆರಾಧ್ಯ ದೈವ, ಡಿ ಬಾಸ್ ದರ್ಶನ್ ಅವರ ದಿ ಡೆವಿಲ್ ಸಿನಿಮಾ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಹಲವು ವಿವಾಧದ ನಡುವೆಯು ಸಿನಿಮಾ Collection ಬಲು ಜೋರಾಗಿಯೇ ಇದೆ. ರಾಜ್ಯಾದ್ಯಂತ ತೆರೆಕಂಡಿರುವ ಈ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದು, ಬಾಕ್ಸ್ ಆಫೀಸ್ ಸುಲ್ತಾನನಿಗೆ ಭರ್ಜರಿ ಬೆಂಬಲವನ್ನು ನೀಡುತ್ತಿದ್ದಾರೆ.
ಡಿ ಬಾಸ್ ಡೆವಿಲ್ ಮೂವಿ ಭರ್ಜರಿ ಕಲೆಕ್ಷನ್
ಈ ವರ್ಷದ ಬಹುನಿರೀಕ್ಷಿತ ಚಿತ್ರ Devi ಕಳೆದ ಗುರುವಾರ, ಡಿಸೆಂಬರ್ 11ರಂದು ಗ್ರ್ಯಾಂಡ್ ರಿಲೀಸ್ ಕಂಡಿದೆ. ನಿರೀಕ್ಷೆಯಂತೆ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. ತೆರೆಕಂಡ ನಾಲ್ಕೇ ದಿನಗಳಲ್ಲಿ ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರವು 21.45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನು ಓದಿ : ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಪ್ರವಾಸಿ ಬಸ್

ಕೇಂದ್ರ ಕಾರಾಗೃಹದಲ್ಲಿ ದಾಸ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಕೇಂದ್ರ ಕಾರಾಗೃಹ ಸೇರಿದ್ದು, ನಾಯಕ ನಟನ ಅನುಪಸ್ಥಿತಿ ಸಿನಿಮಾ ಸುತ್ತಲಿನ ಕುತೂಹಲದ ಜೊತೆಗೆ ಗದ್ದಲವನ್ನು ಹೆಚ್ಚಿಸಿತ್ತು. ನಮ್ಮ ಮೆಚ್ಚಿನ ನಟನನ್ನು ನಾವು ಗೆಲ್ಲಿಸಿಕೊಡುತ್ತೇವೆ ಎಂದು ಅಭಿಮಾನಿಗಳು ಪಣ ತೊಟ್ಟಿದ್ದರೂ, ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಅನುಮಾನ Social Media ಗಳಲ್ಲಿ ಎದ್ದಿತ್ತು.
ಅಭಿಮಾನಿಗಳು ಸಂತಸ
ಸಿನಿಮಾ ರಿಲೀಸ್ಗೂ ಮುನ್ನ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಪತ್ರವೊಂದನ್ನು ಕಳುಹಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ಸಂದೇಶದಲ್ಲಿ, ಯಾವುದೇ ನೆಗೆಟಿವಿಟಿಗೆ ಗಮನ ಹರಿಸದೇ ಸಿನಿಮಾಗೆ ಬೆಂಬಲ ಕೊಡಿ ಎಂದು ನಾಯಕ ನಟ ಮನವಿ ಮಾಡಿಕೊಂಡಿದ್ದರು. ಅದರಂತೆ, ಅಭಿಮಾನಿಗಳೂ ಕೂಡಾ ತಾವು ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದರು. ಸಿನಿಮಾವೀಗ ಯಶಸ್ಸಿನಲೆಯಲ್ಲಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.

ವಿವಾದದ ನಡುವೆ 4ನೇ ದಿನಕ್ಕೆ 21 ಕೋಟಿ
ಸಿನಿಮಾ ಇಂಡಸ್ಟ್ರಿ ವರದಿ ಪ್ರಕಾರ, 10 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ‘ದಿ ಡೆವಿಲ್’, ತನ್ನ 4ನೇ ದಿನ ಭಾನುವಾರದಂದು 4.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
Pan India Trend ಜೋರಾಗಿರುವ ಸದ್ಯದ ಪರಿಸ್ಥಿತಿಯಲ್ಲಿ, ಒಂದೇ ಭಾಷೆಯಲ್ಲಿ ತೆರೆಕಂಡು ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತಿರೋದು ಒಂದು ಅದ್ಭುತ ಯಶಸ್ಸೇ. ಮುಂದಿನ ದಿನಗಳಲ್ಲಿ ಡಿ ಬಾಸ್ ರ ಡೆವಿಲ್ ಮೂವಿ ಯಾವ ಮಟ್ಟಕ್ಕೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ : ಕಾಂಗ್ರೆಸ್ ಶಾಸಕ ಶಾಮನೂರು ಶಿವಲಿಂಗಪ್ಪ ನಿಧನ- ಅನಾರೋಗ್ಯದಿಂದ ಅಗಲಿದ ಶಾಸಕ




