Bengaluru : ಬೆಂಗಳೂರುನಲ್ಲಿ ಪೊಲೀಸ್ ಎಂದು ಬಿಲ್ಡಪ್ ಕೊಟ್ಟು ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್ಐ (Fake PSI) ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Bengaluru : ಯೂನಿಫಾರಂ ಧರಿಸಿ ಬೆದರಿಕೆ – ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಬಸ್ಟ್
ಬೆಂಗಳೂರುನಲ್ಲಿ ಪೊಲೀಸ್ ಎಂದು ಬಿಲ್ಡಪ್ ಕೊಟ್ಟು ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್ಐ (Fake PSI) ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಯೂನಿಫಾರಂ ಧರಿಸಿ ಮನೆಗಳಿಗೆ ನುಗ್ಗಿ ಬೆದರಿಕೆ ಹಾಕಿ ಡಕಾಯಿತಿ ಮಾಡುತ್ತಿದ್ದ ಈ ಗ್ಯಾಂಗ್ ಅನ್ನು ವಿದ್ಯಾರಣ್ಯಪುರ ಪೊಲೀಸರು ಬೇಧಿಸಿದ್ದಾರೆ.
ಬಂಧಿತ ಆರೋಪಿಗಳು ?
ಬಂಧಿತ ಆರೋಪಿಗಳನ್ನು ಮಲ್ಲಿಕಾರ್ಜುನ, ಪ್ರಮೋದ್, ವಿನಯ್, ಹೃತ್ವಿಕ್ ಎಂದು ಗುರುತಿಸಲಾಗಿದೆ.ಆರೋಪಿಗಳು ಪೂರ್ವ ಯೋಜನೆಯಂತೆ ಮನೆಗೆ ನುಗ್ಗಿ, ಪೊಲೀಸ್ ಅಂತ ನಂಬಿಸಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು.
PSI ಆಗುವ ಕನಸು, ನಕಲಿ ಪೊಲೀಸ್ ಜೀವನ
ಮುಖ್ಯ ಆರೋಪಿ ಮಲ್ಲಿಕಾರ್ಜುನ PSI ಆಗಲು ಎರಡು ಬಾರಿ ಪರೀಕ್ಷೆ ಬರೆದಿದ್ದರೂ ಫೇಲ್ ಆಗಿದ್ದ.ಆದರೂ ಪರೀಕ್ಷೆ ಪಾಸ್ ಆಗಿ PSI ಆಗಿದ್ದೇನೆ ಎಂದು ಊರಲ್ಲಿ ಬಿಂಬಿಸಿದ್ದ.
ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ, ಶೂ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು,ಸ್ವಂತ ಊರು ಸಿರಗುಪ್ಪದಲ್ಲಿ ನಾನು ಬೆಂಗಳೂರಿನಲ್ಲಿ PSI ಎಂದು ಬಿಲ್ಡಪ್ ಕೊಟ್ಟಿದ್ದ.
ಐಷಾರಾಮಿ ಜೀವನಕ್ಕಾಗಿ ಅಪರಾಧದ ದಾರಿ
ಐಷಾರಾಮಿ ಜೀವನ ನಡೆಸುವ ಆಸೆಯಿಂದ ಮಲ್ಲಿಕಾರ್ಜುನ ಅಡ್ಡದಾರಿ ಹಿಡಿದಿದ್ದ.ಈ ಕೃತ್ಯಕ್ಕೆ ಎ4 ಆರೋಪಿ ಹೃತ್ವಿಕ್ ಸಂಪೂರ್ಣ ಸಾಥ್ ನೀಡಿದ್ದಾನೆ.ಹೃತ್ವಿಕ್, ನವೀನ್ ಎಂಬವರ ಚಲನವಲನಗಳನ್ನು ಗಮನಿಸಿ, ಅವರ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರುವ ಮಾಹಿತಿ ಮಲ್ಲಿಕಾರ್ಜುನನಿಗೆ ನೀಡಿದ್ದ.
ನವೀನ್ ಮನೆಗೆ ನುಗ್ಗಿ ಡಕಾಯಿತಿ
ಈ ತಿಂಗಳ 7 ರಂದು, ಆರೋಪಿಗಳು ಪೊಲೀಸ್ ಯೂನಿಫಾರಂ ಧರಿಸಿ ಕಾರಿನಲ್ಲಿ ನವೀನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.”ನೀನು ಗಾಂಜಾ ಮಾರುತ್ತಿದ್ದೀಯಾ, ಮನೆ ಸರ್ಚ್ ಮಾಡಬೇಕು” ಎಂದು ಬೆದರಿಸಿದ್ದಾರೆ.
ನವೀನ್ ಮೇಲೆ ಲಾಠಿ ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ,ಅರೆಸ್ಟ್ ಮಾಡಬಾರದೆಂದರೆ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಎಷ್ಟು ಹಣ ದೋಚಿದ್ದರು?
ಆರೋಪಿಗಳು ಖಾತೆಯಿಂದ ₹87,000 , ಬೀರುವನಲ್ಲಿದ್ದ ₹53,000 , ಪರ್ಸ್ನಲ್ಲಿದ್ದ ₹2,000 ಒಟ್ಟು ಹಣ ಕಸಿದುಕೊಂಡು ಪರಾರಿಯಾಗಿದ್ದರು.
ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ
ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ದೂರು ದಾಖಲಿಸಿದ್ದರು.ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ನಕಲಿ PSI ಸೇರಿ ನಾಲ್ವರನ್ನು ಬಂಧಿಸಿದ್ದಾರೆ.ಪೊಲೀಸರು , ₹45,000 ನಗದು , ಕೃತ್ಯಕ್ಕೆ ಬಳಸಿದ ಕಾರು ಸೀಜ್ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಸಾರ್ವಜನಿಕರಿಗೆ ಎಚ್ಚರಿಕೆ
ಈ ಘಟನೆ Fake Police Extortion in Bengaluru ಪ್ರಕರಣಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತದೆ.ಅಪರಿಚಿತರು ಪೊಲೀಸ್ ಎಂದು ಹೇಳಿಕೊಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.




