Kitchen Recipe : ಎಗ್ ಬಿರಿಯಾನಿ (Egg Biryani) ಅಂದರೆ ಕಡಿಮೆ ಸಮಯದಲ್ಲಿ ತಯಾರಾಗುವ, ಸುವಾಸನೆಯಿಂದ ಕೂಡಿದ ಪರಿಪೂರ್ಣ ಊಟ. ಇಲ್ಲಿದೆ ಹಂತ ಹಂತವಾಗಿ ಮಾಡುವ ಸರಳ ವಿಧಾನ.

Kitchen Recipe : ಮನೆಯಲ್ಲಿ ಸುಲಭವಾಗಿ ಮಾಡುವ ರುಚಿಕರ ಎಗ್ ಬಿರಿಯಾನಿ
ಬೇಕಾಗುವ ಪದಾರ್ಥಗಳು (Ingredients for Egg Biryani)
- ಸೋನಾ ಮಸೂರಿ ಅಕ್ಕಿ – ½ ಕೆಜಿ
- ಬೇಯಿಸಿದ ಮೊಟ್ಟೆ – 5
- ಚಕ್ಕೆ, ಲವಂಗ – ಸ್ವಲ್ಪ
- ಏಲಕ್ಕಿ – 5–6
- ಪಲಾವ್ ಎಲೆ, ಕಲ್ಲು ಹೂ – ಸ್ವಲ್ಪ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಹಸಿಮೆಣಸಿನ ಕಾಯಿ – 6 (ಉದ್ದಕ್ಕೆ ಕತ್ತರಿಸಿದ)
- ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ)
- ಟೊಮೆಟೋ – 2 (ಸಣ್ಣಗೆ ಕತ್ತರಿಸಿದ)
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಮೊಸರು ಅಥವಾ ತೆಂಗಿನ ಹಾಲು – ½ ಕಪ್
- ದನಿಯಾ ಪುಡಿ – 1 ಚಮಚ
- ಖಾರದ ಪುಡಿ – 1 ಚಮಚ
- ಬಿರಿಯಾನಿ ಮಸಾಲೆ ಪುಡಿ – ½ ಚಮಚ
- ಅರಿಶಿಣ ಪುಡಿ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಸ್ವಲ್ಪ
- ತುಪ್ಪ – 2 ಚಮಚ
ಎಗ್ ಬಿರಿಯಾನಿ ಮಾಡುವ ವಿಧಾನ (How to Make Egg Biryani)
ಮೊದಲು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ತುಪ್ಪ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಗೂ ಕಲ್ಲು ಹೂ ಸೇರಿಸಿ ಸುಗಂಧ ಬರಿಸುವಂತೆ ಹುರಿಯಿರಿ.
ಅದಾದ ಮೇಲೆ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಬಂಗಾರದ ಬಣ್ಣ ಬರುವವರೆಗೂ ಹುರಿಯಿರಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೋ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
ಈಗ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲೆ ಸೇರಿಸಿ ಮಿಶ್ರಣ ಮಾಡಿ. ನಂತರ ಮೊಸರು ಅಥವಾ ತೆಂಗಿನ ಹಾಲು ಹಾಕಿ 5–10 ನಿಮಿಷ ಕುದಿಯಲು ಬಿಡಿ.
ಇದಕ್ಕೆ ಅಗತ್ಯವಿರುವಷ್ಟು ನೀರು ಹಾಗೂ ನೆನೆಸಿಟ್ಟ ಅಕ್ಕಿ ಸೇರಿಸಿ ಕುಕ್ಕರ್ ಮುಚ್ಚಿ 2–3 ಸಿಟಿ ಬರುವವರೆಗೆ ಬೇಯಿಸಿ. ಕೊನೆಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಹಸುರಾಗಿ ಮಿಶ್ರಣ ಮಾಡಿದರೆ, ಸುವಾಸನೆಯ ಎಗ್ ಬಿರಿಯಾನಿ ಸವಿಯಲು ಸಿದ್ಧ.
ಈ ಎಗ್ ಬಿರಿಯಾನಿಯನ್ನು ಈರುಳ್ಳಿ ರೈತಾ ಅಥವಾ ಸಲಾಡ್ ಜೊತೆ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.




