
MADUGARI:
ತುಮಕೂರು ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೀದಿಗೆ ಬಂದ್ರೆ ಸಾಕು ಎಲ್ಲಿ ನಾಯಿಗಳು ಎರಗುತ್ತಾವೋ ಅನ್ನೋ ಭಯ… ಆತಂಕದಲ್ಲೇ ನಿತ್ಯ ಜನರು ಓಡಾಡುವ ಪರಿಸ್ಥಿತಿ ಇದೆ. ಇನ್ನು ತುಮಕೂರು ಜಿಲ್ಲೆಯಾದ್ಯಂತ ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 10 ಸಾವಿರ ಮಂದಿಗೆ ಬೀದಿ ನಾಯಿ ಕಡಿತ ಪ್ರಕರಣ ದಾಖಲಾಗಿದ್ರೆ, ಇತ್ತ ಮಧುಗಿರಿ ತಾಲೂಕು ಒಂದರಲ್ಲೇ ಕಳೆದ ಆರು ತಿಂಗಳಲ್ಲಿ ಸುಮಾರು ಒಂದು ಸಾವಿರದ ಇನ್ನೂರ ಹದಿನಾಲ್ಕು ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಮಧುಗಿರಿ ಜನರಿಗೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದ್ದು, ಬೀದಿ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ ಅಲ್ದೇ ರಸ್ತೆಗೆ ಬರುಲು ಮಕ್ಕಳು, ವಯಸ್ಸಾದವರು ಬರಲು ಹೆದರುವಂತಾಗಿದೆ. ಕೊಡಿಗೇನಹಳ್ಳಿಯಲ್ಲಿ ಒಂದು ದಿನಕ್ಕೆ ಸುಮಾರು 5 ರಿಂದ 10 ಮಂದಿ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಬೀದಿ ನಾಯಿಗಳು ಏಕಾಏಕಿ ಅಟ್ಯಾಕ್ ಮಾಡ್ತಾ ಇದ್ದು, ಪುಟ್ಟ ಮಕ್ಕಳನ್ನು ರೋಡಿಗೆ ಬೀಳಲು ಹೆದರುವಂತಾಗಿದೆ.

ಇನ್ನು ಕೊಡಿಗೇನಹಳ್ಳಿ ಗ್ರಾಮದ ತ್ಯಾಜ್ಯ ಹಾಗೂ ಕೋಳಿ ತ್ಯಾಜ್ಯ ಸಮರ್ಪಕವಾಗಿ ನಿರ್ವಹಣೆಯಾಗದ ಪರಿಣಾಮ ಬೀದಿ ನಾಯಿಗಳ ಹಿಂಡು ರಸ್ತೆಯಲ್ಲಿ ದಾಳಿ ಮಾಡುತಿದ್ದು, ಸಾರ್ವಜನಕರ ಮೇಲೆ ಎರಗುವುದಲ್ಲದೆ ರೋಡ್ ಅಲ್ಲಿ ಹೋಗ್ತಾ ಇದ್ದ ಬೈಕ್ಗಳನ್ನು ನಾಯಿಗಳು ಅಟ್ಟಾಡಿಸಿಕೊಂಡು ಹೋಗಿ ಅಟ್ಯಾಕ್ ಮಾಡ್ತಾ ಇದ್ದು, ಜನರು ಓಡಾಡಲು ಹೆದರುವಂತಾಗಿದೆ. ಅಲ್ದೇ ನಾಯಿ ಕಡಿತದಿಂದ ಜನರು ನಿತ್ಯ ಆಸ್ಪತ್ರೆ ಪಾಲಾಗ್ತಾ ಇದ್ರೆ, ನಾಯಿ ದಾಳಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಅಪಘಾತಕ್ಕೆ ಈಡಾಗುಂತೆ ಮಾಡಿದೆ. ಅಲ್ಲದೆ ರಾತ್ರಿ ವೇಳೆ ಕಿಡಿಗೇಡಿಗಳು ಬೇರೆ ಗ್ರಾಮದ ನಾಯಿಗಳನ್ನು ತಂದು ಬಿಟ್ಟು ಹೋಗುತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದ್ದು ಗ್ರಾಮದ ಮುಖ್ಯ ರಸ್ತೆಯಲ್ಲಿ ಸುಮಾರು ನೂರಾರು ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಮದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಬೀದಿನಾಯಗಳಿವೆ ಎಂದು ಅಂದಾಜಿಸಲಾಗಿದೆ.
ಇನ್ನು ನಾಯಿ ದಾಳಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಅಪಘಾತಕ್ಕೆ ಈಡಾಗುಂತೆ ಮಾಡಿದೆ. ಇತ್ತ ಬೀದಿ ನಾಯಿಗಳನ್ನು ಹಿಡಿಯುವಂತೆ ಸಾರ್ವಜನಿಕರು ಅದೆಷ್ಟೋ ಬಾರಿ ಗ್ರಾಮ ಪಂಚಾಯ್ತಿ ಅವರಿಗೆ ಮನವಿ ಮಾಡಿದ್ರು ಕೂಡ ಅಧಿಕಾರಿಗಳು ಮಾತ್ರ ಕೇರ್ ಮಾಡ್ತಾ ಇಲ್ಲ.. ನಾಯಿಗಳನ್ನು ಹಿಡಿಯುವಲ್ಲಿ ಅಧಿಕಾರಿಗಳು ವಿಫಲಾವಾಗಿದ್ದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.




