
KOLAR : ಮಹಾಲಯ ಅಮಾವಾಸ್ಯೆಯ ವಿಶೇಷ ಕೋಲಾರ ತಾಲೂಕಿನ ಕೋರಗೊಂಡನಹಳ್ಳಿಯ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಟ ಧ್ರುವ ಸರ್ಜಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಈ ದೇವಾಲಯ ಪುರಾತನ ಇತಿಹಾಸವನ್ನು ಹೊಂದಿದ್ದು, ಭಕ್ತರಲ್ಲಿ ಅಪಾರ ನಂಬಿಕೆ ಇದೆ. ಧ್ರುವ ಸರ್ಜಾ ಅವರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಿದ್ದಾರೆ.
ಇನ್ನು ನಟ ಧ್ರುವ ಸರ್ಜಾ ಕಾಲಭೈರವನ ಅಥವಾ ಕಾಶಿ ವಿಶ್ವೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕವನ್ನು ಸಹ ಮಾಡಿಸಿದ್ದಾರೆ. ಈ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಪೂರ್ವ ವಲಯ ಡಿಸಿಪಿ ಡಿ. ದೇವರಾಜ್ ಸಹ ಭಾಗವಹಿಸಿ ಸಾಥ್ ನೀಡಿದ್ದಾರೆ.




