ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾದ ಘಟನೆ Gadag ನಲ್ಲಿ ನಡೆದಿದೆ.

ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ ಆಗಿರುವಂತಹ ಘಟನೆ Gadag ಜಿಲ್ಲೆಯ ಮುಂಡರಗಿ ಪಟ್ಟಣದ SBS ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಸ್ಟೆಲ್ನಲ್ಲಿ ನಡೆದಿದೆ. BAMS ಅಂತಿಮ ವರ್ಷದಲ್ಲಿ ಓದುತ್ತಿದ್ದ ಈಶ್ವರ ಗಾದಗೆ (21) ಮೃತ ವಿದ್ಯಾರ್ಥಿ. ಮೃತ ವಿದ್ಯಾರ್ಥಿ ಈಶ್ವರ ಗಾದಗೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದವರು.
ಇದನ್ನು ಓದಿ : ಕಾಂಗ್ರೆಸ್ ಕುರ್ಚಿ ಕಿಚ್ಚಿಗೆ ಮತ್ತೆ ತುಪ್ಪ ಸುರಿದ CM ಪುತ್ರ ಯತೀಂದ್ರ
ಕೊಲೆ ಮಾಡಿ ನೇಣು ಹಾಕಿದ್ದಾರೆ
ಇನ್ನು ಈ ಬಗ್ಗೆ ಪೋಷಕರು “ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಕಾಲೇಜು ಆಡಳಿತ ಮತ್ತು ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕುಟುಂಬಕ್ಕೆ ಮಾಹಿತಿ ನೀಡದೆ ಮೃತದೇಹವನ್ನು ಆಸ್ಪತ್ರೆಗೆ ಸಾಗಾಟ ಮಾಡಿದ್ದಾರೆ.
ಡೆತ್ ನೋಟ್ ಪತ್ತೆ
ಶೋಧನೆ ವೇಳೆ ಈಶ್ವರ ಕಾಲಿನ ಬೆರಳಿ ಉಗುರು ಕತ್ತರಿಸುವ ಮತ್ತು ದೇಹದ ಭಾಗಗಳಲ್ಲಿ ರಕ್ತಗಾಯಗಳಿರುವುದು ಗಮನಕ್ಕೆ ಬಂದಿದೆ. ಇನ್ನೂ ಎರಡು ಲೈನ್ ಇರುವ ಡೆತ್ ನೋಟ್ ಪತ್ತೆಯಾಗಿದ್ದು, ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಸಾರಿ ಮಮ್ಮಿ, ಪಪ್ಪಾ’ ಎಂದು ಬರೆದಿರುವುದಾಗಿ ತಿಳಿದಿದೆ. ಕುಟುಂಬಸ್ಥರು ಈ ಬರವಣಿಗೆ ಅವರ ಮಗನದ್ದು ಅಲ್ಲ ಎಂದು ಹೇಳಿದ್ದಾರೆ. ಕುಟುಂಬಸ್ಥರು. ಕಾಲೇಜ್ನವರು ಸೃಷ್ಟಿ ಮಾಡಿರುವ Death Note ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ನೋಡಿ : ಜೈಲಿನಲ್ಲಿ ದರ್ಶನ್ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ




