ಇಂದು ರಾಜ್ಯದೆಲ್ಲೆಡೆ ಡಿ ಬಾಸ್ ಡೆವಿಲ್ ಹೌಸ್ ಫುಲ್, ಹೌಸ್ ಫುಲ್.

ದರ್ಶನ್ ಅಭಿನಯದ ಡೆವಿಲ್ (Devil) ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದ ಫ್ಯಾನ್ಸ್ ಇವತ್ತು ಫುಲ್ ಖುಷಿಯಾಗಿದ್ದಾರೆ. ಕಾರಣ ಇಂದು ರಾಜ್ಯದೆಲ್ಲೆಡೆ ಡೆವಿಲ್ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿದ್ದು, ಎಲ್ಲೆಡೆ ಡಿ ಬಾಸ್ ಫ್ಯಾನ್ಸ್ ಸಿನಿಮಾ ನೋಡಿ ಬಂದು ಫುಲ್ ಸೈಕ್ ಆಗಿದ್ದು, ಪಂಚಿಂಗ್ ಮೇಲೆ ಪಂಚಿಂಗ್ ಡೈಲಾಗ್ ಹೊಡೆದು ಡಿ ಬಾಸ್ ಮೂವಿಗೆ Full Marks ನೀಡಿದ್ದಾರೆ.
ಆಗಾದ್ರೆ ಮೊದಲ ದಿನ ಡಿ ಬಾಸ್ ಮೂವಿ ಡೆವಿಲ್ Fans Show ಹೇಗಿತ್ತು, ಸಿನಿಮಾ ನೋಡಿ ಬಂದ ದಚ್ಚು ಅಭಿಮಾನಿಗಳು ಏನಂದ್ರು. ಅದ್ರಲ್ಲೂ ನಮ್ಮ ತುಮಕೂರಿನಲ್ಲಿ ಡಿ ಬಾಸ್ ಮೂವಿಗೆ ಯಾವ ರೀತಿ ರೆಸ್ಪಾನ್ಸ್ ಇದೆ ನೋಡೋಣ.

ದಚ್ಚು ಮೂವಿಗೆ ಫ್ಯಾನ್ಸ್ ಗಳಿಂದ ಫುಲ್ ಮಾರ್ಕ್ಸ್
ಇಂದು ರಾಜ್ಯಾದ್ಯಂತ ಡೆವಿಲ್ ಸಿನಿಮಾ ಫುಲ್ House Full ಆಗಿ ಓಡ್ತಾ ಇದೆ. ಡಿ ಬಾಸ್ ಫ್ಯಾನ್ಸ್ ಡೆವಿಲ್ ಸಿನಿಮಾಗೆ ಕೊಡ್ತಿರೋ Response ನೋಡಿ ಉರ್ಕಳೋರ್ಗೆಲ್ಲ ಫ್ಯಾನ್ಸ್ ಡಿಚ್ಚಿ ಹೊಡೆದಿದ್ದಾರೆ. ರಾಜ್ಯದೆಲ್ಲೆಡೆ ಇಂದು ಡಿ ಬಾಸ್ ಮೂವಿ ಡೆವಿಲ್ ರಿಲೀಸ್ ಆಗಿದ್ದು, ಥಿಯೇಟರ್ ಗಳು ಹೌಸ್ ಫುಲ್ ಆಗಿವೆ.
ಇತ್ತ ತುಮಕೂರಿನಲ್ಲಿ ಡಿ ಬಾಸ್ ಮೂವಿಗೆ ರಿಲೀಸ್ ಆಗಿದ್ದು, ಡೆವಿಲ್ ಸಿನಿಮಾ ನೋಡಿ ಫ್ಯಾನ್ಸ್ ಗಳು ಫುಲ್ ಖುಷ್ ಆಗಿದ್ದಾರೆ. ಗಾಯಿತ್ರಿ ಥಿಯೇಟರ್ ಮುಂದೆ ಅಭಿಮಾನಿಗಳು ಫ್ಯಾನ್ಸ್ ಶೋ ನೋಡಿ ಬಂದು ಫುಲ್ ಸೈಕಾಗಿ, ಸಿನಿಮಾಗೆ 100% ಮಾರ್ಕ್ಸ್ ನೀಡಿದ್ರು.
ಇದನ್ನು ಓದಿ : IPL ಬ್ರಾಂಡ್ ಮೌಲ್ಯ ಗಣನೀಯ ಕುಸಿತ!

ಥಿಯೇಟರ್ ಮುಂದೆ ಪಂಚಿಂಗ್ ಡೈಲಾಗ್ ಹೊಡೆದ ಸೆಲಬ್ರಿಟೀಸ್
ಇನ್ನು ಗಾಯಿತ್ರಿ ಥಿಯೇಟರ್ ಒಳಗೆ ಡಿ ಬಾಸ್ ಎಂಟ್ರಿಗೆ ಫ್ಯಾನ್ಸ್ ಫುಲ್ ಶಿಳ್ಳೆ, ಚಪ್ಪಾಳೆ ಹೊಡೆದು ಡಿ ಬಾಸ್, ಡಿ ಬಾಸ್ ಎಂದು ಕೂಗಿ ಸಖತ್ ರೆಸ್ಪಾನ್ಸ್ ನೀಡಿದ್ರು. ಪ್ರತಿ ಸೀನ್ ನೋಡ್ಬೇಕಾದ್ರೂ Wow ಎಂದು ಫುಲ್ ಸೈಕಾಗಿ ಕೂಗಾಡಿದ್ರು. ಇನ್ನು ಡಿ ಬಾಸ್ ಡಬಲ್ ರೋಲ್ ನೋಡಿದ ಫ್ಯಾನ್ಸ್ ಕೃಷ್ಣ ಕೊಳಲನ್ನ ಮಾತ್ರ ಊದಲ್ಲ, ಶಂಕಾನು ಊದ್ತಾನೆ ಎಂದು ಪಂಚಿಂಗ್ ಮೇಲೆ ಪಂಚಿಂಗ್ ಡೈಲಾಗ್ ಹೊಡೆದ್ರು.

ಡಿ ಬಾಸ್ ಫ್ಯಾನ್ಸ್ ಗಳಿಂದ ಅನ್ನಸಂತರ್ಪಣೆ
ಗಾಯಿತ್ರಿ ಚಿತ್ರಮಂದಿರದ ಮುಂದೆ ಅಭಿಮಾನಿಗಳು ತಮ್ಮ ನೆಚ್ಚಿನ ಬಾಸ್ ಗಾಗಿ ಸಿನಿಮಾ ನೋಡಲು ಬರುತ್ತಿದ್ದ ಫ್ಯಾನ್ಸ್ ಗಳಿಗೆ ಅನ್ನಸಂತರ್ಪಣೆ ಕೂಡ ಆಯೋಜಿಸಿದ್ರು. ಈ ವೇಳೆ ಅಭಿಮಾನಿ ಒಬ್ರು ಮಾತನಾಡಿ, ಫ್ಯಾನ್ಸ್ ಇರೋವರೆಗೂ ಯಾರು ನಮ್ ಬಾಸನ್ನ ಏನೂ ಮಾಡೋಕ್ಕಾಗಲ್ಲ. ನಮ್ ಬಾಸ್ ಯಾವತ್ತು ಒಳ್ಳೆದನ್ನೆ ಮಾಡ್ತಾರೆ. ಅವರು ಒಳಗಿರ್ಲಿ, ಹೊರಗಿರ್ಲಿ ಯಾವತ್ತು ನಾವು ಅವರನ್ನ ಬಿಟ್ಟುಕೊಡಲ್ಲ. ನಮ್ ಬಾಸ್ ನೋಡಿ ಹೊಟ್ಟೆ ಉರ್ಕಳೋರೆಲ್ಲ ಬಂದು ಡೆವಿಲ್ ಮೂವಿ ನೋಡ್ಲಿ ಎಂದು ಅಭಿಮಾನಿಗಳು ಫುಲ್ ಖುಷಿಯಾದ್ರು.

ಇಂದು ರಾಜ್ಯದೆಲ್ಲೆಡೆ ಡಿ ಬಾಸ್ ಡೆವಿಲ್ ಹೌಸ್ ಫುಲ್
ಒಟ್ಟಿನಲ್ಲಿ ರಾಜ್ಯಾದ್ಯಂತ ಡೆವಿಲ್ ಮೂವಿ ಪುಲ್ ಹೌಸ್ ಫುಲ್ ಆಗಿ ಓಡ್ತಾ ಇದ್ದು, ಎಲ್ಲೆಡೆ ಡೆವಿಲ್ ಮೂವಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಡ್ತಾ ಇದಾರೆ. ಡಿ ಬಾಸ್ ಡಬಲ್ ರೋಲ್ ನೋಡಿ ಫ್ಯಾನ್ಸ್ ಎಲ್ಲೆಡೆ ಫ್ಯಾನ್ಸ್ ಗಳು ಹೇಳ್ತಾ ಇರೋದು ಒಂದೇ ಡೈಲಾಗ್ ಕೃಷ್ಣ ಕೊಳಲಷ್ಟೆ ಊದಲ್ಲ, ಶಂಕಾನೂ ಊದ್ ತಾನೆ ಅಂತ ಪಂಚಿಂಗ್ ಡೈಲಾಗ್ ಹೊಡಿತಿದ್ದಾರೆ. First Day First Show ನೋಡಿ ಬಂದ ಫ್ಯಾನ್ಸ್ ಡಿ ಬಾಸ್ ಪರ ಜೈಕಾರ ಹಾಕಿದ್ರು.
ಮೊದಲ ದಿನವೇ ಡೆವಿಲ್ ಮೂವಿಗೆ ಫುಲ್ ರೆಸ್ಪಾನ್ಸ್ ಬರುತ್ತಿದ್ದು, ಗಾಂಧಿನಗರದಲ್ಲಿ ಡಿ ಬಾಸ್ ಮೂವಿ ದೂಳೆಬ್ಬಿಸೋದು ಗ್ಯಾರೆಂಟಿ ಎನ್ನಲಾಗಿದೆ.

ಇದನ್ನು ನೋಡಿ : DEVIL MOVIE REVIEW | D BOSS DOUBLE ACTINGಗೆ ಫ್ಯಾನ್ಸ್ ಫುಲ್ ಫಿದಾ | TUMAKURU




