Devil ರಿಲೀಸ್ಗೆ ಕೇವಲ 2 ದಿನ ಬಾಕಿ – ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ?

ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ (Devil) ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ರಿಲೀಸ್ಗೆ ಕೇವಲ ಎರಡು ದಿನ ಬಾಕಿ ಇದ್ದರೂ, ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬುಕಿಂಗ್ ಇನ್ನೂ ಆರಂಭವಾಗಿಲ್ಲ. ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ Booking Open ಆಗುವ ಸಾಧ್ಯತೆ ಇದೆ.
ಟಿಕೆಟ್ ದರ ಎಷ್ಟು?
ಇನ್ನು Devil ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಕೋಟ್ಯಾಂತರ ವೀಕ್ಷಣೆ ಪಡೆದಿದೆ. ಅಡ್ವಾನ್ಸ್ ಬುಕಿಂಗ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಟಿಕೆಟ್ ದರ ₹400 ಇದ್ದರೂ, ಪ್ರೇಕ್ಷಕರು ಬುಕಿಂಗ್ ಮಾಡುತ್ತಿದ್ದಾರೆ. ವಿಶೇಷವಾಗಿ, ಡಿಸೆಂಬರ್ 11ರ ಬೆಳಿಗ್ಗೆ 6.30ರ ಶೋ House Full ಆಗುತ್ತಿರುವುದು ಚಿತ್ರಕ್ಕೆ ಇರುವ ಕ್ರೇಜ್ ತೋರಿಸುತ್ತದೆ. ಇನ್ನು ಈ ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದು, ದರ್ಶನ್ ಅಭಿನಯಿಸಿರುವ ಕಾರಣದಿಂದಲೇ ಚಿತ್ರಕ್ಕೆ ಭಾರೀ ನಿರೀಕ್ಷೆ ಮೂಡಿದೆ.
ಇದನ್ನು ಓದಿ : ಸ್ನಾನಕ್ಕೆ ಹೋದವಳು ಬಾತ್ರೂಂನಲ್ಲಿ ಬಲಿ!

ಫ್ಯಾನ್ಸ್ ಕೋರಿಕೆ ಏನು..?
ಡೆವಿಲ್ ಸಿನಿಮಾದ ನಟ ದರ್ಶನ್ Renukaswamy Murder Case ನಲ್ಲಿ ಜೈಲಿನಲ್ಲಿ ಇದ್ದಾರೆ. ಹೀಗಾಗಿ, ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳೇ ವಹಿಸಿಕೊಂಡಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಗೆ Pre Release Event ಮಾಡಬೇಕಿತ್ತು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು.
ದರ್ಶನ್ ಬಗ್ಗೆ ಹರಿದಾಡಿದೆ ಸುದ್ದಿ
ದರ್ಶನ್ ಜೈಲಿನಲ್ಲಿ ಇದ್ದರೂ, ಅವರ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಅವರು ಕೈದಿಗಳೊಂದಿಗೆ ಕಿರಿಕ್ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಇದನ್ನು ನೋಡಿ : ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?




