ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ IPL ನ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿದಿದೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬ್ರಾಂಡ್ ಮೌಲ್ಯದಲ್ಲಿ ಈ ವರ್ಷ ಗಣನೀಯ ಕುಸಿತ ದಾಖಲಾಗಿದೆ. ಇದೇ ರೀತಿಯಾಗಿ ಬಹುತೇಕ ಎಲ್ಲಾ ತಂಡಗಳ ಮೌಲ್ಯವೂ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
RCB ಗೆ 2ನೇ ಸ್ಥಾನ
18 ವರ್ಷಗಳ ನಂತರ ಮೊದಲ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೌಲ್ಯ ₹876.75 ಕೋಟಿಗೆ ಇಳಿದಿದ್ದು, ಇದು ಕಳೆದ ಬಾರಿಗಿಂತ ಶೇ.10ರಷ್ಟು ಕಡಿಮೆಯಾಗಿದೆ. ಐಪಿಎಲ್ ತಂಡಗಳ ಪೈಕಿ RCB ಎರಡನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ಗೆ ಗರಿಷ್ಠ ಹಿನ್ನಡೆ
ಇನ್ನು ತಂಡಗಳ ಮೌಲ್ಯ ಕುಸಿತದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಗರಿಷ್ಠ ಶೇ.35ರಷ್ಟು ನಷ್ಟ ಅನುಭವಿಸಿದೆ.
ಇದನ್ನು ಓದಿ : ಇವನು ಪಾಠ ಕಲಿಸುವ ಶಿಕ್ಷಕನಲ್ಲ..ಕಾಮ ಪಿಶಾಚಿ
ತಂಡಗಳ ಮೌಲ್ಯ ಕುಸಿತದ ವಿವರ
- ಸನ್ರೈಸರ್ಸ್ ಹೈದರಾಬಾದ್ – ಶೇ.34
- ಕೋಲ್ಕತ್ತ ನೈಟ್ ರೈಡರ್ಸ್ (KKR) – ಶೇ.33
- ಡೆಲ್ಲಿ ಕ್ಯಾಪಿಟಲ್ಸ್ – ಶೇ.26
- ಚೆನ್ನೈ ಸೂಪರ್ ಕಿಂಗ್ಸ್ – ಶೇ.24
- ಮುಂಬೈ ಇಂಡಿಯನ್ಸ್ – ಶೇ.9
- ಪಂಜಾಬ್ ಕಿಂಗ್ಸ್ – ಶೇ.3
- ಲಖನೌ ಸೂಪರ್ ಜೈಂಟ್ಸ್ – ಶೇ.2
ಗುಜರಾತ್ ಟೈಟಾನ್ಸ್ ಏರಿಕೆ
10 ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಮಾತ್ರ ಮೌಲ್ಯವೃದ್ಧಿ ಕಂಡಿದ್ದು, ಶೇ.2ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. 2024ರ ಹೋಲಿಕೆಗೆ 2025ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯವು ಶೇ.20ರಷ್ಟು ಕುಸಿದಿದೆ ಎಂದು ಬ್ರಾಂಡ್ ಫೈನಾನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ತಿಳಿಸಿದ್ದಾರೆ.
ಡಿಸೆಂಬರ್ 16ರಂದು ಮಿನಿ ಹರಾಜು
ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿವೆ. ಹರಾಜು ಪಟ್ಟಿಯಲ್ಲಿ 112 ಭಾರತೀಯರು ಮತ್ತು 238 ವಿದೇಶಿ ಕ್ರಿಕೆಟಿಗರು ಸೇರಿದಂತೆ 350 ಆಟಗಾರರಿದ್ದು, ಗರಿಷ್ಠ 77 ಸ್ಥಾನಗಳು ಲಭ್ಯವಿದೆ.
ಇದನ್ನು ನೋಡಿ : ತುಮಕೂರಿನಲ್ಲಿ DEVIL ಅಬ್ಬರ D BOSS FANS FULL CRAZE | DEVIL FANS IN TUMAKURU




