Hassan ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಗ್ಯಾಂಗ್ ಆಕ್ಟಿವ್ ಆಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಗ್ಯಾಂಗ್ ಆಕ್ಟಿವ್ ಆಗಿದ್ದು, ಜನರು ಆತಂಕದಲ್ಲಿ ಇರುವಂತೆ ಮಾಡಿದೆ. ಚಿನ್ನ, ದುಡ್ಡು ಕದಿಯೋದನ್ನ ನೋಡಿದ್ದೇವೆ ಆದ್ರೆ ಪಂಚರ್ ವಾಹನವನ್ನು ಕಳ್ಳರು ಬಿಡದೇ ಕದ್ದೊಯ್ದಿದ್ದಾರೆ. ಹೌದು ಪಂಚರ್ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಮೊಬೈಲ್ ಪಂಚರ್ ಶಾಪ್ ಅಂಗಡಿ ಸಮೇತ ವಾಹನವನ್ನು ಖದೀಮರು ಕದ್ದೊಯ್ದಿರೋ ಘಟನೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದಿದೆ.
ಪಂಚರ್ ವಾಹನವನ್ನೇ ಕಳ್ಳತನ
Hassan ಜಿಲ್ಲೆಯ ಸಕಲೇಶಪುರದ ಎಜಾಜ್ ಅಹಮದ್ ಎಂಬ ವ್ಯಕ್ತಿ, ಜೀವನ ನಡೆಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ KA 04 -C- 5521 ಮಹೇಂದ್ರ ಪಿಕಪ್ ವಾಹನದಲ್ಲಿ ಮೊಬೈಲ್ ಪಂಚರ ಶಾಪ್ ಇಟ್ಕೊಂಡು ವಾಹನಗಳಿಗೆ ಪಂಚರ್ ಹಾಕುವ ಕೆಲಸ ಮಾಡ್ತಾ ಇದ್ರು. ಎಂದಿನಂತೆ ಅಂಗಡಿ ಮುಂದೆ ಮೊಬೈಲ್ ಪಂಚರ್ ವಾಹನವನ್ನು ನಿಲ್ಲಿಸಲಾಗಿದ್ದು, ನಿನ್ನೆ ರಾತ್ರಿ ಖದೀಮರು ಪಂಚರ್ ವಾಹನವನ್ನು ಕದ್ದೊಯ್ದಿದ್ದಾರೆ.
ಇದನ್ನು ಓದಿ : ಧರ್ಮಸ್ಥಳದಲ್ಲಿ ಪ್ರೇಮಿಗಳ ಮದುವೆ -ಪೊಲೀಸರು ಏನ್ಮಾಡಿದ್ರು ನೋಡಿ..!?

ಖದೀಮರಿಗಾಗಿ ಬಲೆ ಬೀಸಿದ ಪೊಲೀಸರು
ನಿನ್ನೆ ರಾತ್ರಿ ಸಕಲೇಶಪುರದ ಹೆದ್ದಾರಿಯ ಟೋಲ್ ಬಳಿ ಇದ್ದ ಪಂಚರ್ ಅಂಗಡಿ ಮುಂದೆ ನಿಲ್ಲಿಸಿದ್ದ ಪಂಚರ್ ಮೊಬೈಲ್ ಶಾಪ್ನನ್ನು ಕಳ್ಳರು ಕದ್ದಿದ್ದಾರೆ. ಬೆಳಗ್ಗೆ ಅಂಗಡಿ ಬಳಿ ಬಂದಾಗ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ.
ಮೊಬೈಲ್ ಪಂಚರ್ ವಾಹನದಲ್ಲಿ ಸುಮಾರು 6 ಲಕ್ಷ ಬೆಲೆ ಬಾಳುವ ವಸ್ತುಗಳು ಇದ್ದು, ಎಜಾಜ್ ಅಹಮದ್ ಕಂಗಾಲಾಗಿದ್ದಾರೆ. ಕಳ್ಳರು ಮೊಬೈಲ್ ಪಂಚರ್ ವಾಹನವನ್ನು ಕದ್ದೊಯ್ದಿರೋ ದೃಶ್ಯ CC Camera ದಲ್ಲಿ ಸೆರೆಯಾಗಿದ್ದು, ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಸದನದಲ್ಲಿ YATNAL ಅನಾಥ ಆದ್ರಾ.? – ಶಾಸಕ ಯತ್ನಾಳ್ ಫುಲ್ ಗರಂ.?




