ಕುಟುಂಬ ಸಮೇತ ನಟಿ ಮಾಲಾಶ್ರೀ ಶಿರಡಿಗೆ ಭೇಟಿ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ (Malashree) ಶಿರಡಿಗೆ ಕುಟುಂಬ ಸಮೇತ ಭೇಟಿ ನೀಡಿ, ಸಾಯಿಬಾಬಾಗೆ ಚಿನ್ನದ ಕಿರೀಟ ಸಮರ್ಪಿಸಿದ್ದಾರೆ. ಸಾಯಿಬಾಬಾ ಮೇಲಿನ ತಮ್ಮ ಭಕ್ತಿ ಮತ್ತು ಅನುಭವಗಳನ್ನು ಈ ಸಂದರ್ಭದಲ್ಲಿ ಅವರು ಹಂಚಿಕೊಂಡಿದ್ದಾರೆ.
ನಮ್ಮ ಕುಟುಂಬಕ್ಕೆ ಬಾಬಾ ತುಂಬಾ ನೀಡಿದ್ದಾರೆ
ಮಗಳ ಸಿನಿಮಾ ಶುರುವಾಗುವ ಮುನ್ನ ಶಿರಡಿಗೆ ಭೇಟಿ ನೀಡಿರುವ Malashree, “ನಮ್ಮ ಕುಟುಂಬಕ್ಕೆ ಬಾಬಾ ತುಂಬಾ ನೀಡಿದ್ದಾರೆ. ನಮ್ಮಿಂದ ಚಿಕ್ಕದೊಂದು ಉಡುಗೊರೆ ನೀಡಿದ್ದೇವೆ ಅಷ್ಟೇ” ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಇದನ್ನು ಓದಿ : ಹಾಸನದಲ್ಲಿ ಗಾಂಜಾ ನಶೆಯಲ್ಲಿ ಮೆಕಾನಿಕ್ ಭೀಕರ ಹತ್ಯೆ..!

ಮಾಲಾಶ್ರೀ ಯಾವ ಸಿನಿಮಾ ಮೂಲಕ ಜನಪ್ರಿಯತೆ..?
1989ರಲ್ಲಿ ಬಿಡುಗಡೆಗೊಂಡ ‘ನಂಜುಂಡಿ ಕಲ್ಯಾಣ’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ Malashree, ತಮ್ಮ ಮೊದಲ ಸಿನಿಮಾದ ಸಂದರ್ಭದಲ್ಲಿಯೇ ಶಿರಡಿಗೆ ಮೊದಲ ಬಾರಿ ಭೇಟಿ ನೀಡಿದ್ದರು ಎಂಬ ಹಳೆಯ ನೆನಪನ್ನೂ ಹಂಚಿಕೊಂಡರು.
ಮಾಲಾಶ್ರೀ ಮತ್ತು ಅವರ ಪತಿ, ದಿವಂಗತ ನಿರ್ಮಾಪಕ ರಾಮು, ಶಿರಡಿ ಸಾಯಿಬಾಬಾ ಭಕ್ತರಾಗಿ ಪರಿಚಿತರಾಗಿದ್ದಾರೆ. ಇಂದು ಕೂಡ ಮಾಲಾಶ್ರೀ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸುವ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.

ಇದನ್ನು ನೋಡಿ : TERRIBEL ACCI*ENT | ಏಕಾಏಕಿ ಟೆಂಪೋ ಟೈಯರ್ ಬ್ಲ್ಯಾಸ್ಟ್ – ಓರ್ವ ಸಾ..* ಮೂವರಿಗೆ ಗಂಭೀರ




